6
  • Latest

ಬೈಕ್ ಎಗರಿಸಿ ಸಿಕ್ಕಿ ಬಿದ್ದ ಕಾಡಿನ ಕಳ್ಳ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Sunday, July 5, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಬೈಕ್ ಎಗರಿಸಿ ಸಿಕ್ಕಿ ಬಿದ್ದ ಕಾಡಿನ ಕಳ್ಳ!

AchyutKumar by AchyutKumar
in ಸ್ಥಳೀಯ

ಯಲ್ಲಾಪುರ: ಮಾದೇವಕೊಪ್ಪದ ಬೆಂಡು ಪಾಂಡ್ರಮೀಸೆ ಅವರ ಬೈಕ್ ಕದ್ದ ಕಳ್ಳ ಸಿಕ್ಕಿಬಿದ್ದಿದ್ದಾನೆ. ಖಂಡ್ರನಕೊಪ್ಪದ ಕಾಡಿನಲ್ಲಿ ಅಡಗಿಸಿಟ್ಟಿದ್ದ ಬೈಕನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಅಕ್ಟೊಬರ್ 29ರ ರಾತ್ರಿ ಬೆಂಡು ಪಾಂಡ್ರಮೀಸೆ ಅವರು ಮನೆ ಮುಂದೆ ಬೈಕ್ ನಿಲ್ಲಿಸಿದ್ದರು. ಬೆಳಗ್ಗೆ ಎದ್ದು ನೋಡಿದಾಗ ಅವರ ಬೈಕ್ ಕಾಣುತ್ತಿರಲಿಲ್ಲ. ಕೂಲಿ ಕೆಲಸ ಮಾಡುವ ಜಡಗಿನಕೊಪ್ಪದ ಪ್ರಕಾಶ ಕೃಷ್ಣ ಸಿದ್ದಿ (23) ರಾತ್ರಿ ವೇಳೆ ಆ ಬೈಕನ್ನು ಅಪಹರಿಸಿದ್ದ. ಕದ್ದ ಬೈಕನ್ನು ಖಂಡ್ರನಕೊಪ್ಪದ ಕಾಡಿನಲ್ಲಿ ಅಡಗಿಸಿಟ್ಟಿದ್ದ. ಅದಾದ ನಂತರ `ತನಗೇನೂ ಗೊತ್ತೇ ಇಲ್ಲ’ ಎಂಬAತೆ ಪ್ರಕಾಶ ಸಿದ್ದಿ ಸುಮ್ಮನಿದ್ದ. ಆದರೆ, ಆತನ ಕುಕೃತ್ಯದ ಬಗ್ಗೆ ಹುಲಗೋಡಿನ ಕೃಷ್ಣ (ಹೆಸರು ಬದಲಿಸಿದೆ) ಅರಿತಿದ್ದರು.

ಹುಲಗೋಡಿನ ಕೃಷ್ಣ ಅವರು ಬೈಕ್ ಕಳ್ಳನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ತನ್ನ ಹೆಸರನ್ನು ಬಹಿರಂಗಪಡಿಸಿದAತೆ ಕೇಳಿಕೊಂಡರು. ಈ ಖಚಿತ ಮಾಹಿತಿ ಆಧರಿಸಿ ಪಿಎಸ್‌ಐ ಶೇಡಜಿ ಚೌಹಾಣ, ಪೊಲೀಸ್ ಸಿಬ್ಬಂದಿ ಬಸವರಾಜ ಹಗರಿ, ಉಮೇಶ ತುಂಬರಗಿ, ಪರಶುರಾಮ ಕಾಳೆ, ಪ್ರವೀಣ ಪೂಜಾರ, ಗಂಗಾರಾಮ ಸೇರಿ ಕಾಡಿನಲ್ಲಿ ಬೈಕಿನ ಹುಡುಕಾಟ ನಡೆಸಿದರು. ಗಿಡಮರಗಳ ಮರೆಯಲ್ಲಿ ಬಿದ್ದಿದ್ದ ಬೈಕು ಅವರಿಗೆ ಕಾಣಿಸಿತು.

ಸಂಗ್ರಹಿಸಿದ ಸಾಕ್ಷಿಗಳ ಜೊತೆ ಪ್ರಕಾಶ ಸಿದ್ದಿಯನ್ನು ವಿಚಾರಣೆಗೆ ಒಳಪಡಿಸಿದಾಗ `ತಾನೇ ಬೈಕ್ ಕದ್ದಿದ್ದು’ ಎಂದು ಒಪ್ಪಿಕೊಂಡ. `ತನ್ನನ್ನು ಬಿಟ್ಟುಬಿಡಿ’ ಎಂದು ಆತ ಕೈ ಮುಗಿದ. `ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಬೇಕು’ ಎಂದು ಬುದ್ದಿ ಹೇಳಿದ ಪೊಲೀಸರು ಆತನನ್ನು ಜೈಲಿಗೆ ಕಳುಹಿಸಿದರು. ಬೈಕ್ ಕಳ್ಳನನ್ನು ಬಂಧಿಸಿರುವ ಬಗ್ಗೆ ಸಿಪಿಐ ರಮೇಶ ಹಾನಾಪುರ ಅವರು ಪೊಲೀಸ್ ಉಪಾಧ್ಯಕ್ಷ ಗಣೇಶ ಕೆ ಎಲ್ ಹಾಗೂ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರಿಗೆ ವರದಿ ಸಲ್ಲಿಸಿದರು.

 

 

ShareSendTweetShare
Previous Post

ಚಲಿಸಯುತ್ತಿದ್ದ ಸ್ಕೂಟಿಗೆ ದಿಢೀರ್ ಬೆಂಕಿ!

Next Post

ಜಿಲ್ಲಾಧಿಕಾರಿ ಸೂಚನೆಗೂ ಇಲ್ಲ ಬೆಲೆ: ಲೋಕೋಪಯೋಗಿ ಅಧಿಕಾರಿ ವಿರುದ್ಧ ದೂರು!

Next Post

ಜಿಲ್ಲಾಧಿಕಾರಿ ಸೂಚನೆಗೂ ಇಲ್ಲ ಬೆಲೆ: ಲೋಕೋಪಯೋಗಿ ಅಧಿಕಾರಿ ವಿರುದ್ಧ ದೂರು!

ಸ್ನೇಹ ಸಮ್ಮಿಲನ | ವೇದಿಕೆ ಏರಿದ ಸೈನಿಕನಿಗೆ ಹೊಡೆದ ಶಿಕ್ಷಕ!

ವಿದ್ಯುತ್ ಟ್ರಾನ್ಸ್ಫಾರ್ಮರ್'ಗೆ ಗುದ್ದಿದ VRL ಬಸ್ಸು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.