ಕಾರವಾರ: ಬೈಕಿಗೆ ದನ ಅಡ್ಡ ಬಂದ ಪರಿಣಾಮ ನೆಲಕ್ಕೆ ಬಿದ್ದ ಕೃಷ್ಣ ಗಾಂವಕಾರ ಸೊಂಟ ಮುರಿದುಕೊಂಡಿದ್ದಾರೆ. ಮಂಗಳೂರಿನ ಎಜೆ ಆಸ್ಪತ್ರೆಗೆ ಕರೆದೊಯ್ದರೂ ಅವರ ಸೊಂಟ ಮೊದಲಿನಂತೆ ಮಾಡಲು ಸಾಧ್ಯವಾಗಿಲ್ಲ.
ಮೀನುಗಾರಿಕೆ ನಡೆಸಿ ಬದುಕು ಕಟ್ಟಿಕೊಂಡಿದ್ದ ಅಂಕೋಲಾದ ಬೇಳಾಬಂದರುವಿನ ಕೃಷ್ಣ ಶೇಷಗಿರಿ ಗಾಂವಕಾರ (48) ಡಿ 4ರಂದು ಕಾರವಾರದಿಂದ ಅಂಕೋಲಾ ಕಡೆ ಬೈಕಿನಲ್ಲಿ ಸಂಚರಿಸುತ್ತಿದ್ದರು. ಅಮದಳ್ಳಿಯ ದೇವತಿ ದೇವಸ್ಥಾನದ ಬಳಿ ಅವರ ಬೈಕಿಗೆ ಏಕಾಏಕಿ ದನ ಅಡ್ಡ ಬಂದಿತು. ಬೈಕಿನಿಂದ ಬಿದ್ದ ಕೃಷ್ಣ ಗಾಂವಕಾರ ನೆಲಕ್ಕೆ ಬಿದ್ದು ಸೊಂಟ ಮುರಿದುಕೊಂಡರು.
ಅವರನ್ನು ಕಾರವಾರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆ ಅಗತ್ಯ ಎಂದರು. ಹೀಗಾಗಿ ಕೃಷ್ಣ ಗಾಂವಕಾರ ಅವರನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿನ ವೈದ್ಯರು `ಸೊಂಟವನ್ನು ಮೊದಲಿನಂತೆ ಮಾಡಲು ಅಸಾಧ್ಯ’ ಎಂದರು. ಹೀಗಾಗಿ ಇದೀಗ ಕೃಷ್ಣ ಗಾಂವಕಾರ ಅವರನ್ನು ಮರಳಿ ಕಾರವಾರ ಆಸ್ಪತ್ರೆಗೆ ದಾಖಲಿಸಿ ಆರೈಕೆ ಮಾಡಲಾಗುತ್ತಿದೆ.




