ಭಟ್ಕಳ: ಬೆಳಕೆ ತಾಲೂಕಿನ ಜನತಾ ಕಾಲೋನಿ ಬಳಿ ಒಂದೇ ಕುಟುಂಬದ ನಾಲ್ವರ ಮೇಲೆ ಹೆಜ್ಜೇನು ದಾಳಿ ನಡೆದಿದೆ.
ಪರಮೇಶ್ವರಿ ಮೊಗೇರ, ಮಂಜುನಾಥ ಮೊಗೇರ, ಭರತ ಮೊಗೇರ ಹಾಗೂ ಇನ್ನೊಬ್ಬರು ದಾಳಿಗೆ ಒಳಗಾಗಿದ್ದಾರೆ. ದಾಳಿಗೆ ಒಳಗಾದವರನ್ನು ತಾಲೂಕಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈವರೆಲ್ಲರೂ ತಮ್ಮ ಮನೆಯ ಗೇಟ್ ಬಳಿ ನಿಂತಿದ್ದಾಗ ಏಕಾಏಕಿ ಹೆಜ್ಜೇನು ದಾಳಿ ನಡೆಸಿದೆ. ಜೇನು ದಾಳಿಗೆ ಒಳಗದಾವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.




