ಕುಮಟಾ: ಶಾಸಕ ದಿನಕರ ಶೆಟ್ಟಿ ಅವರ ತೇಜೋವಧೆಗೆ ವರ್ತಿಸಿದ ಆರೋಪದ ಹಿನ್ನಲೆ ಮೂವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
`ಕನ್ನಡ ವಾಣಿ’ ವೆಬ್ ಪೋರ್ಟಲ್’ನ ನವೀನ ಸಾಗರ್, `ಕೆನರಾ ಪ್ಲಸ್ ವಾಹಿನಿ’ಯ ಚರಣ ನಾಯ್ಕ ಹಾಗೂ `ಯುಕೆ ಎಕ್ಸಪ್ರೆಸ್’ ಜಾಲತಾಣದ ರಾಘವೇಂದ್ರ ಪಟಗಾರ ಎಂಬಾತರ ಹೆಸರು ನಮೂದಿಸಿ ದಿನಕರ ಶೆಟ್ಟಿ ಅವರ ಅಭಿಮಾನಿ ಜಯಾ ಪ್ರಕಾಶ ಶೇಟ್ ಪೊಲೀಸ್ ದೂರು ನೀಡಿದ್ದಾರೆ. `ಶಾಸಕ ದಿನಕರ ಶೆಟ್ಟಿ ಅವರ ಮನೆಗೆ ಮಹಿಳೆಯೊಬ್ಬರು ಸಹಾಯ ಕೇಳಿಕೊಂಡು ಬಂದಿದ್ದು, ಈ ವೇಳೆ 80 ಸಾವಿರ ರೂ ಕಳ್ಳತನವಾಗಿತ್ತು. ಅದೇ ವಿಷಯದ ಹಿನ್ನಲೆ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಶಾಸಕರ ವಿರುದ್ಧ ಅವಹೇಳನಕಾರಿ ವರದಿ ಪ್ರಸಾರ ಮಾಡಲಾಗಿದೆ’ ಎಂಬುದು ಜಯಾ ಪ್ರಕಾಶ ಶೇಟ್ ಅವರ ದೂರು.
`ಹಣ ಕಳ್ಳತನ ನಡೆದಾಗ ದೂರು ಕೊಡಲಿಲ್ಲ. ಆ ಬಗ್ಗೆ ಸುದ್ದಿ ಪ್ರಸಾರ ಮಾಡಿದವರ ವಿರುದ್ಧ ದೂರು ನೀಡಲಾಗಿದೆ’ ಎಂಬುದು ಎದುರುದಾರರ ಹೇಳಿಕೆ. `ಈ ಬಗೆಯ ಸುದ್ದಿ ಪ್ರಸಾರದಿಂದ ಶಾಸಕರ ಪರ ಹಾಗೂ ವಿರೋಧ ಅಭಿಪ್ರಾಯ ಹೊಂದಿದವರ ನಡುವೆ ಗುಂಪು ಸಂಘರ್ಷ ನಡೆಯುವ ಸಾಧ್ಯತೆಯಿದೆ’ ಎಂದು ಸಹ ಜಯಾ ಪ್ರಕಾಶ ಶೇಟ್ ಹೇಳಿದ್ದಾರೆ. `ವರದಿಯಲ್ಲಿ ಆಕ್ಷೇಪಾರ್ಹ ಪದ ಬಳಕೆ ಆಗಿಲ್ಲ. ಅದಾಗಿಯೂ ಮಾಧ್ಯಮದ ಧ್ವನಿ ಅಡಗಿಸುವ ಪ್ರಯತ್ನ ನಡೆದಿದೆ’ ಎಂಬುದು ಎದುರುದಾರರ ವಾದ.




