ಭಟ್ಕಳ: ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಬಸ್ಸು ಬೆಂಕಿಯಿoದ ಹೊತ್ತಿ ಉರಿದಿದ್ದು, ಚಾಲಕನ ಸಮಯಪ್ರಜ್ಞೆಯಿಂದಾಗಿ ಎಲ್ಲಾ ಮಕ್ಕಳು ಸುರಕ್ಷಿತವಾಗಿದ್ದಾರೆ. ಬಸ್ಸು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
ಸೋಮವಾರ ಭಟ್ಕಳದ ಹೆಬಳೆಯಲ್ಲಿರುವ ನ್ಯೂ ಶಮ್ಸ್ ಶಾಲೆಯ ಬಸ್ಸು ಭಟ್ಕಳದಿಂದ ಶಿರಾಲಿ ಮಾರ್ಗವಾಗಿ ಸಂಚರಿಸುತ್ತಿತ್ತು. ವೆಂಕಟಾಪುರದ ಬಳಿ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇದನ್ನು ಗಮನಿಸಿದ ಚಾಲಕ ತಕ್ಷಣ ವಾಹನ ನಿಲ್ಲಿಸಿದರು. ಈ ವೇಳೆ ಬಸ್ಸಿನಲ್ಲಿದ್ದ 12 ಮಕ್ಕಳನ್ನು ಕೆಳಗೆ ಇಳಿಸಲಾಯಿತು. ಅದಾದ ಕ್ಷಣ ಮಾತ್ರದಲ್ಲಿ ಬಸ್ಸು ಹೊತ್ತಿ ಉರಿಯಿತು.
ಬಸ್ಸಿನಲ್ಲಿದ್ದ ಬ್ಯಾಟರಿ ಶಾರ್ಟ ಸರ್ಕೀಟ್ ಪರಿಣಾಮ ಬೆಂಕಿ ತಗಲಿರುವುದಾಗಿ ಅಂದಾಜಿಸಲಾಗಿದೆ. ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ಆರಿಸುವ ಪ್ರಯತ್ನ ನಡೆಸಿದರು. ಅದಾಗಿಯೂ ಬಸ್ಸು ಭಸ್ಮವಾಗಿದೆ.