ಕುಮಟಾ: ಕಡಿಮೆ ಗ್ರಾಮದ ಪಿ ಎಂ ಮಾಸ್ತರರ ಮನೆ ಬಳಿ ಎರಡು ಬೈಕುಗಳ ನಡುವೆ ಅಪಘಾತವಾಗಿದೆ. ಈ ಅಪಘಾತದಲ್ಲಿ ಒಂದು ಬೈಕ್ ಓಡಿಸುತ್ತಿದ್ದ ಬಂಕಿಕೊಡ್ಲದ ಶಿಕ್ಷಕ ಕಡುಬು ಗೌಡ ಹಾಗೂ ಇನ್ನೊಂದು ಬೈಕ್ ಸವಾರ ಪ್ರೇಮಾನಂದ ಗೌಡ ಗಾಯಗೊಂಡಿದ್ದಾರೆ.
ಶಿಕ್ಷಕ ಕಡುಬು ಗೌಡ ಅವರು ಡಿ 13ರ ಸಂಜೆ ಗೋನೆಹಳ್ಳಿಯಿಂದ ಬಂಕಿಕೊಡ್ಲದ ಕಡೆ ಬೈಕಿನಲ್ಲಿ ಹೊರಟಿದ್ದರು. ಬಂಕಿಕೊಡ್ಲ ಕಡೆಯಿಂದ ಬೈಕ್ ಓಡಿಸಿಕೊಂಡು ಬಂದ ಪ್ರೇಮಾನಂದ ಗೌಡ ಅವರು ಕಡಿಮೆ ಗ್ರಾಮದ ಪಿ ಎಂ ಮಾಸ್ತರರ ಮನೆ ಬಳಿ ಬಲಕ್ಕೆ ಬಂದು ಡಿಕ್ಕಿ ಹೊಡೆದರು. ಡಿಕ್ಕಿ ರಭಸಕ್ಕೆ ಎರಡು ಬೈಕಿನಲ್ಲಿದ್ದವರು ನೆಲಕ್ಕೆ ಬಿದ್ದು ಪೆಟ್ಟು ಮಾಡಿಕೊಂಡರು.
ಈ ಅಪಘಾತದಿಂದ ಶಿಕ್ಷಕ ಕಡಬು ಗೌಡ ಅವರ ತಲೆಗೆ ಪೆಟ್ಟಾಗಿದ್ದು, ಮೈ-ಕೈಗಳಿಗೂ ಗಾಯವಾಗಿದೆ. ಪ್ರೇಮಾನಂದ ಗೌಡ ಅವರ ಅತಿ ವೇಗವೇ ಈ ಅಪಘಾತಕ್ಕೆ ಕಾರಣ ಎಂದು ಕಡುಬು ಗೌಡ ಅವರು ಪೊಲೀಸ್ ದೂರು ನೀಡಿದ್ದಾರೆ.



