ವೃದ್ಧರ ನೋವು, ಅಂಗವಿಕಲರ ಅಂತರಾಳ, ಕೈಲಾಗದವರಿಗೆ ನೆರವು ನೀಡುವ ಜೊತೆ ಸೇವಾ ಮನೋಭಾವನೆಯಿಂದ ದುಡಿಯುವ ಕೈಗಳಿಗೆ ಕಾಸು ಕೊಡುವ ಸಂಸ್ಥೆ ಚೈತನ್ಯ ಪೌಂಡೇಶನ್. ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹಾಗೂ ಶಿರಸಿಯಲ್ಲಿ ಶಾಖಾ ಕಚೇರಿ ಹೊಂದಿರುವ ಚೈತನ್ಯ ಪೌಂಡೇಶನ್ ಕಳೆದ 16 ವರ್ಷಗಳಿಂದ ನೂರಕ್ಕೂ ಅಧಿಕ ವೃದ್ಧರ ಪಾಲಿಗೆ ಆಶಾಕಿರಣವಾಗಿದೆ. ಅದೇ ಪ್ರಮಾಣದಲ್ಲಿ ಯುವಕ-ಯುವತಿಯರಿಗೆ ಉದ್ಯೋಗವಕಾಶವನ್ನು ನೀಡಿದೆ.

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನವರಾದ ನಾಗರಾಜ ಮಡಿವಾಳರ್ ಅವರು ಚೈತನ್ಯ ಪೌಂಡೇಶನ್’ನ ರೂವಾರಿ. ಬೆಂಗಳೂರಿನಲ್ಲಿ ಸೇವಾ ಚಟುವಟಿಕೆ ಶುರು ಮಾಡಿದ ಅವರು ಕ್ರಮೇಣ ಅದನ್ನು ಶಿರಸಿಗೂ ವಿಸ್ತರಿಸಿದರು. ಇದೀಗ ರಾಜ್ಯದ ಎಲ್ಲಾ ಭಾಗಗಳಲ್ಲಿಯೂ ಅವರು ಹೋಂ ನರ್ಸಿಂಗ್ ಸೇವೆ ನೀಡುತ್ತಿದ್ದಾರೆ. ನೊಂದವರಿಗೆ ನೆರವು ನೀಡುತ್ತಿರುವ ಈ ಸೇವೆ ಗುರುತಿಸಿ ನಾಗರಾಜ ಅವರಿಗೆ ಹಲವು ಪ್ರಶಸ್ತಿಗಳು ಸಿಕ್ಕಿವೆ.
ಮನೆ ಮನೆಯಲ್ಲಿಯೂ ವೃದ್ಧರು-ಅಶಕ್ತರು ಇರುವುದು ಸಾಮಾನ್ಯ. ರೋಗಿ ಹಾಗೂ ಆರೈಕೆದಾರರ ನಡುವೆ ಸಂಪರ್ಕ ಸೇತುವಾಗಿರುವ ಈ ಸಂಸ್ಥೆ ಅಶಕರ ಬೇಕು-ಬೇಡಗಳಿಗೆ ತ್ವರಿತವಾಗಿ ಸ್ಪಂದಿಸುತ್ತದೆ. ಸಮಯಕ್ಕೆ ಸರಿಯಾಗಿ ಔಷಧಿ ವಿತರಣೆ, ಅಶಕ್ತರ ಊಟ-ತಿಂಡಿ ವ್ಯವಸ್ಥೆ, ಆರೋಗ್ಯದ ಬಗ್ಗೆ ಕಾಳಜಿವಹಿಸುವುದರಲ್ಲಿ ಚೈತನ್ಯ ಪೌಂಡೇಶನ್ ಕೊಡುಗೆ ಅಪಾರ. ಬಿಡುವಿಲ್ಲದ ಕೆಲಸ, ಸಂಸಾರದ ಜಂಜಾಟದಿoದ ಅಶಕ್ತರ ಕುರಿತು ಗಮನಹರಿಸಲಾಗದವರಿಗೆ ಹೆಚ್ಚಿನ ಒತ್ತು ಕೊಟ್ಟು ಈ ಸಂಸ್ಥೆ ಸೇವೆ ಕೊಡುತ್ತದೆ.
ಮುಖ್ಯವಾಗಿ ವೃದ್ಧರು, ಅಂಗವಿಕಲರು, ರೋಗಿಗಳ ಆರೈಕೆಗಾಗಿ ಚೈತನ್ಯ ಸಂಸ್ಥೆ ಜನರನ್ನು ನೇಮಿಸುತ್ತದೆ. ನೊಂದವರ ಜೊತೆ ಸೌಜನ್ಯದಿಂದ ವರ್ತಿಸಿ ಅವರ ಆಗು-ಹೋಗುಗಳ ಬಗ್ಗೆ ಕಾಳಜಿವಹಿಸುವವರಿಗೆ ಆದ್ಯತೆ ಕೊಡಲಾಗುತ್ತದೆ. ಇದಕ್ಕಾಗಿ ರಾಜ್ಯದ ಎಲ್ಲಾ ಭಾಗಗಳಿಂದಲೂ ಉದ್ಯೋಗ ನೇಮಕಾತಿ ನಡೆಸುತ್ತದೆ. ಅಗತ್ಯವಿದ್ದವರಿಗೆ ಯೋಗ್ಯ ಸಿಬ್ಬಂದಿ ಸೇವೆ ನೀಡುವಲ್ಲಿ ಚೈತನ್ಯ ಪೌಂಡೇಶನ್ ಮುಂಚೂಣಿಯಲ್ಲಿದೆ. ಅಶಕ್ತರ ಆರೈಕೆಗಾಗಿ ಸ್ವಂತ ವೃದ್ಧಾಶ್ರಮವನ್ನು ಸಹ ಚೈತನ್ಯ ಪೌಂಡೇಶನ್ ಹೊಂದಿದೆ.
ಚೈತನ್ಯ ಪೌಂಡೇಶನ್ ಸೇವೆಗೆ ಜಾತಿ-ಧರ್ಮದ ಹಂಗಿಲ್ಲ. ಲಿಂಗ ತಾರತಮ್ಯದ ಬೇದವಿಲ್ಲ. ಕನಿಷ್ಠ ಶುಲ್ಕದೊಂದಿಗೆ ಗರಿಷ್ಠ ಸೇವೆ ನೀಡುವ ಕಾರಣ ನಿತ್ಯ ನೂರಾರು ಫೋನ್ ಚೈತನ್ಯ ಕಚೇರಿಗೆ ಬರುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿ ಉದ್ಯೋಗ ಬಯಸಿ ಬಂದ ಯಾರನ್ನು ಸಂಸ್ಥೆಯವರು ಮರಳಿ ಕಳುಹಿಸುವುದಿಲ್ಲ.
ಗರ್ಭಿಣಿ, ಬಾಣಂತಿ, ವೃದ್ಧರು, ಅಂಗವಿಕಲರು, ಬುದ್ದಿಮಾಂದ್ಯರು ಸೇರಿ ಎಲ್ಲಾ ಬಗೆಯ ಅಶಕ್ತರ ಸೇವೆ ಹಾಗೂ ಉದ್ಯೋಗ ಅಗತ್ಯವಿದ್ದವರು ಇಲ್ಲಿ ಫೋನ್ ಮಾಡಿ: 9845577311
#Sponsored