6
  • Latest

ಗೋವಾದ ಕ್ರಿಮಿನಲ್’ಗೆ ಕಾರವಾರದಲ್ಲಿ ಮನೆ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ಗೋವಾದ ಕ್ರಿಮಿನಲ್’ಗೆ ಕಾರವಾರದಲ್ಲಿ ಮನೆ!

AchyutKumar by AchyutKumar
in ದೇಶ - ವಿದೇಶ

ಕಾರವಾರ: ಪೊಲೀಸ್ ಸಿಬ್ಬಂದಿ ನೆರವು ಪಡೆದು ಗೋವಾ ಜೈಲಿನಿಂದ ಪರಾರಿಯಾಗಿ ಸಿಕ್ಕಿಬಿದ್ದಿರುವ ಸುಲೇಮಾನ್ ಖಾನ್ ಕಾರವಾರಕ್ಕೆ ಸಹ ತನ್ನ ವ್ಯವಹಾರ ವಿಸ್ತರಿಸಿದ್ದ. ಇದೇ ಕಾರಣಕ್ಕಾಗಿ ಆತ ಕಾರವಾರದ ಅಪಾರ್ಟಮೆಂಟ್ ಒಂದರಲ್ಲಿ ನಾಲ್ಕು ಮನೆ ಖರೀದಿಸಿದ್ದ!

ಕಾರವಾರ ನಗರದ ಕೋಡಿಬಾಗದ ಅಬಕಾರಿ ಇಲಾಖೆ ಕಚೇರಿ ಬಳಿಯ `ಮಿಡ್‌ಮ್ಯಾಕ್ ಆರ್ಕಿಡ್ ಅಪಾರ್ಟ್ಮೆಂಟ್’ನಲ್ಲಿ ಸುಲೇಮಾನ್ ಖಾನ್ ತನ್ನ ಪತ್ನಿ ಅಪ್ಸಾನಾ ಹೆಸರಿನಲ್ಲಿ ನಾಲ್ಕು ಫ್ಲಾಟ್ ಪಡೆದಿದ್ದ. ಇಲ್ಲಿಯೂ ಆಗಮಿಸಿ ಆತ ಭೂ ವ್ಯವಹಾರ ನಡೆಸುತ್ತಿದ್ದ. ಆದರೆ, ಕಾರವಾರದಲ್ಲಿರುವಾಗ ಆತ ಯಾವುದೇ ಕ್ರಿಮಿನಲ್ ಚಟುವಟಿಕೆ ನಡೆಸಿರಲಿಲ್ಲ. ಹೀಗಾಗಿ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ಒಂದು ದೂರು ದಾಖಲಾಗಿಲ್ಲ!

ಶಿವಮೊಗ್ಗ ಜಿಲ್ಲೆಯ ಸುಲೇಮಾನ್ ಖಾನ್ ಕಳೆದ ಐದು ವರ್ಷಗಳಿಂದ ಕಾರವಾರದಲ್ಲಿ ವಾಸವಾಗಿದ್ದ. ಸಿದ್ದಿಕಿ ಎಂಬ ಹೆಸರಿನಿಂದ ಆತ ಕಳ್ಳ ವ್ಯವಹಾರ ನಡೆಸಿ ಗೋವಾದಲ್ಲಿ ಪ್ರಸಿದ್ಧನಾಗಿದ್ದ. ಭೂಗತ ಲೋಕದ ಸಂಪರ್ಕವನ್ನಿರಿಸಿಕೊAಡು ಅವರ ಮೂಲಕ ಅನೇಕರಿಗೆ ಬೆದರಿಕೆ ಹಾಕಿಸುತ್ತಿದ್ದ. ಆ ಮೂಲಕ ದುಬಾರಿ ಬೆಲೆಯ ಭೂಮಿಗಳನ್ನು ಕಡಿಮೆ ಬೆಲೆಗೆ ಖರೀದಿಸುತ್ತಿದ್ದ. ಹೀಗಾಗಿ ಆತನ ವಿರುದ್ಧ ಗೋವಾ, ಕರ್ನಾಟಕ ರಾಜ್ಯದಲ್ಲಿ ಒಟ್ಟು 17 ಪ್ರಕರಣಗಳು ದಾಖಲಾಗಿದ್ದವು. ಆತನ ಪತ್ನಿ ಅಪ್ಸಾನಾ ವಿರುದ್ಧವೂ ಪ್ರಕರಣಗಳ ವಿಚಾರಣೆ ನಡೆಯುತ್ತಿದ್ದು, ಅಪ್ಸಾನಾ ಸಾರಿಕಾ ಖಾನ್ ಎಂಬ ಹೆಸರಿನಿಂದಲೂ ಚಿರಪರಿಚಿತೆ.

ಗೋವಾದ ಮಾಪುಸಾ ಪೊಲೀಸರು ಸಿದ್ಧಿಕ್’ನನ್ನು ಬಂಧಿಸಿದ್ದರು. ಆದರೆ, ಡಿಸೆಂಬರ್ 13 ರಂದು ಆತ ಗೋವಾದ ರಾಯಬಂದರ್ ಜೈಲಿನಿಂದ ಪರಾರಿಯಾಗಿದ್ದ. ಆತ ತಪ್ಪಿಸಿಕೊಳ್ಳಲು ಕಾರವಾರ ಮೂಲದ ಗೋವಾ ಪೊಲೀಸ್ ಸಿಬ್ಬಂದಿ ಅಮಿತ್ ನಾಯ್ಕ ನೆರವಾಗಿದ್ದ. ಅಮೀತ್ ನಾಯ್ಕಗೆ ಸಹ ಕಾಸು ಕೊಡದೇ ಸಿದ್ಧಿಕ್ ಪರಾರಿಯಾಗಿದ್ದು, ಸಿದ್ಧಿಕ್ ಎಂದು ಕರೆಯಲ್ಪಡುವ ಸುಲೇಮಾನ್ ಖಾನ್ ಬಂಧನಕ್ಕೆ ಗೋವಾ ಪೊಲೀಸರು 14 ತಂಡ ರಚಿಸಿದ್ದರು. ಸೋಮವಾರ ಆತ ಕೇರಳದಲ್ಲಿ ಸಿಕ್ಕಿ ಬಿದ್ದಿದ್ದಾನೆ.

ಇದನ್ನು ಓದಿ: ಆಗ ಪೊಲೀಸ್.. ಇದೀಗ ಕಳ್ಳ!

ಈ ಹಿನ್ನಲೆ ಗೋವಾ ಪೊಲೀಸರು ಆತನಿಗೆ ಸೇರಿರುವ ನಾಲ್ಕು ಫ್ಲಾಟ್‌ಗಳನ್ನು ಸೀಜ್ ಮಾಡಿದ್ದಾರೆ. ಮನೆ ಬಾಗಿಲಿಗೆ ನೋಟಿಸ್ ಅಂಟಿಸಿದ್ದಾರೆ. ಆತನ ಮನೆಯೊಳಗೆ ನಡೆದ ಹುಡುಕಾಟದಲ್ಲಿ 16 ಪಾಸ್‌ಬುಕ್, 30 ಚೆಕ್ ಬುಕ್, ಹಲವು ಆಧಾರ ಕಾರ್ಡ, ರೇಶನ್ ಕಾರ್ಡ ಸಿಕ್ಕಿದೆ.

 

ShareSendTweetShare
Previous Post

ನೇಣಿಗೆ ಶರಣಾದ ಕೂಲಿ ಕಾರ್ಮಿಕ

Next Post

ಆಹಾ ಎಂಥ ಋಚಿ | ಸಿಹಿ ಖಾದ್ಯಕ್ಕೆ ಪ್ರೇಮಕ್ಕ.. ಖಾರ ತಿನಿಸಿದ ಜಲಜಕ್ಕ.. ಮರೆತ ಖಾದ್ಯ ನೆನಪಿಸಿದ ಆಶಕ್ಕ!

Next Post

ಆಹಾ ಎಂಥ ಋಚಿ | ಸಿಹಿ ಖಾದ್ಯಕ್ಕೆ ಪ್ರೇಮಕ್ಕ.. ಖಾರ ತಿನಿಸಿದ ಜಲಜಕ್ಕ.. ಮರೆತ ಖಾದ್ಯ ನೆನಪಿಸಿದ ಆಶಕ್ಕ!

ಸುವರ್ಣ ಸಂಭ್ರಮ | ಒಂದು ಕಾರ್ಯಕ್ರಮ.. ಹಲವರ ಸಮಾಗಮ!

ಸ್ಯಾಮಸಂಗ್ | ಮನೆಯಲ್ಲಿದ್ದ ಮೊಬೈಲ್ ಸ್ಪೋಟ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.