6
  • Latest

ಸುವರ್ಣ ಸಂಭ್ರಮ | ಒಂದು ಕಾರ್ಯಕ್ರಮ.. ಹಲವರ ಸಮಾಗಮ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Thursday, July 2, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಸುವರ್ಣ ಸಂಭ್ರಮ | ಒಂದು ಕಾರ್ಯಕ್ರಮ.. ಹಲವರ ಸಮಾಗಮ!

AchyutKumar by AchyutKumar
in ಸ್ಥಳೀಯ

ಸಿದ್ದಾಪುರ: ಹಾರ್ಸಿಕಟ್ಟಾ ಗ್ರಾಮದ ವಾಜಗದ್ದೆಯ ಶ್ರೀ ದುರ್ಗಾವಿನಾಯಕ ಕೃಷಿಕ ಯುವಕ ಸಂಘಕ್ಕೆ ಈ ವರ್ಷ ಸುವರ್ಣ ಸಂಭ್ರಮ.

ದುರ್ಗಾವಿನಾಯಕ ದೇವರನ್ನು ಸ್ಮರಿಸಿ ವಾಜಗದ್ದೆಯಲ್ಲಿ 1974 ಡಿಸೆಂಬರ್ 24ರಂದು ಅಂದಿನ ತರುಣರು ಸೇವೆ ಮತ್ತು ಶ್ರಮದಾನದ ಬಂಡವಾಳದಲ್ಲಿ ಯುವಕ ಸಂಘ ಸ್ಥಾಪಿಸಿದರು. ಇದೀಗ ಆ ಸಂಘ ಉತ್ತಮ ವಾಚನಾಲಯ ಹೊಂದಿ 3500 ಪುಸ್ತಕಗಳನ್ನು ಸಂಗ್ರಹಿಸಿದೆ. ಜೊತೆಗೆ ಯುವಕ ಸಂಘವೇ ಯಕ್ಷಮಿತ್ರ ಮಂಡಳಿ ಎಂಬ ಸಂಘಟನೆ ಮಾಡಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುತ್ತಿದೆ.

ಸುವರ್ಣ ಸಡಗರದ ಅದ್ಧೂರಿ ಆಚರಣೆಗೆ ಎಲ್ಲಾ ಬಗೆಯ ಸಿದ್ಧತೆ ನಡೆಯುತ್ತಿದ್ದು, ಡಿ 28ರಂದು ಕಾರ್ಯಕ್ರಮ ನಡೆಯಲಿದೆ. ಡಿ 28ರಂದು ಸಮಯ ಬೆಳಗ್ಗೆ ಗಂಟೆಯಿAದ ಧಾರ್ಮಿಕ ಕಾರ್ಯಕ್ರಮದೊಂದಿಗೆ ಸುವರ್ಣ ಸಂಭ್ರಮಕ್ಕೆ ಚಾಲನೆ ದೊರೆಯಲಿದೆ.

ಅಂದು 10.30 ಕ್ಕೆ ಸುವರ್ಣ ಸಂಭ್ರಮ ಕಾರ್ಯಕ್ರಮವನ್ನು ಸಿದ್ದಾಪುರ ಶಿಕ್ಷಣ ಪ್ರಸಾರ ಸಮಿತಿಯ ಅಧ್ಯಕ್ಷ ಶಶಿಭೂಷಣ ಹೆಗಡೆ ಉದ್ಘಾಟಿಸಲಿದ್ದಾರೆ. ಯುವಕ ಸಂಘದ ಸಂಸ್ಥಾಪಕ ಅಧ್ಯಕ್ಷ ಪಿ.ವಿ. ಹೆಗಡೆ ಪೇಟೇಸರ ಅಧ್ಯಕ್ಷತೆ ವಹಿಸಲಿದ್ದಾರೆ. ಅಭ್ಯಾಗತರಾಗಿ ಶಾಸಕ ಭೀಮಣ್ಣ ನಾಯ್ಕ, ಶಿರಸಿ ಡೆವಲಪ್‌ಮೆಂಟ್ ಸೊಸೈಟಿ ಕೃಷಿ ಸಲಹೆಗಾರ ಡಾ. ವಿ.ಎಮ್. ಹೆಗಡೆ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಆರುಣ್ ಎಚ್ ಜಿ ಶ್ರೀಮರ್ಗಾವಿನಾಯಕ ದೇವಸ್ಥಾನದ ಮೊತ್ತೇಸರ ಶ್ರೀಧರ ಹೆಗಡೆ ಪೇಟೇಸರ ಉಪಸ್ಥಿತರಿರಲಿದ್ದಾರೆ.

ಮಧ್ಯಾಹ್ನ 2.30 ರಿಂದ ಹಿಂದೂಸ್ಥಾನಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ಮಧಾ ಭಟ್ ಅಗ್ಗೇರಿ, ಆರಾಧನಾ ಹೆಗಡೆ ಭಂಡಾರಕೇರಿ ಗಾಯನ ನಡೆಯಲಿದೆ. ಹಾರ್ಮೋನಿಯಂನಲ್ಲಿ ಅಜಯ ಹೆಗಡೆ ವರ್ಗಾಸರ, ಮಂಜೀರಾದಲ್ಲಿ ಅನಂತಮೂರ್ತಿ ಭಟ್ಟ ಮತ್ತಿಘಟ್ಟ, ತಬಲಾದಲ್ಲಿ ಶಂಕರ ಹೆಗಡೆ ಶಿರಸಿ, ವಿನಾಯಕ ಹೆಗಡೆ ಸಾಗರ ಸಹಕರಿಸಲಿದ್ದಾರೆ. ಸಂಜೆ 5.30 ರಿಂದ ಸಂಘದ ನೆನಪು-ಮೆಲುಕು ಗೌರವ ಸಮರ್ಪಣೆ, ಸ್ಮರಣಿಕೆ ವಿತರಣೆ ಕಾರ್ಯಕ್ರಮ ನಡೆಯಲಿದೆ.

ಸಂಘದ ಸಂಸ್ಥಾಪಕ ಕಾರ್ಯದರ್ಶಿ ಭಾಸ್ಕರ ಹೆಗಡೆ ಭಂಡಾರಕೇರಿ, ಸಂಘದ ಸ್ಥಾಪನೆಯ ಪ್ರೇರಕ ಗೋಪಾಲ ಹೆಗಡೆ ವಾಜಗದ್ದೆ, ಸಂಘದ ಸಂಸ್ಥಾಪಕ ಖಜಾಂಚಿ ಸೀತಾರಾಮ ಹೆಗಡೆ ಸುಳಗಾರ, ಶ್ರೀದುರ್ಗಾವಿನಾಯಕ ದೇವಸ್ಥಾನದ ಮೊತ್ತೇಸರ ಶ್ರೀಧರ ಹೆಗಡೆ ಪೇಟೇಸರ, ಗ್ರಾಮ ಪಂಚಾಯಿತಿ ಸದಸ್ಯ ಅನಂತ ಹೆಗಡೆ ಹೊಸಗದ್ದೆ, ವಾಜಗದ್ದೆ ಶಾಲೆ ಮುಖ್ಯ ಅಧ್ಯಾಪಕ ಕೆ.ಎನ್. ಹೆಗಡೆ ಬಳ್ಳೂರು ಉಪಸ್ಥಿತರಿರಲಿದ್ದಾರೆ.

ಸಂಜೆ 6.30 ರಿಂದ ಸಮಾರೋಪ ಸಮಾರಂಭ ನಡೆಯಲಿದ್ದು, ಯುವಕ ಸಂಘದ ಅಧ್ಯಕ್ಷ ಗಣಪತಿ ಹೆಗಡೆ ಸುಳಗಾರ ಅಧ್ಯಕ್ಷತೆ ವಹಿಸಲಿದ್ದಾರೆ. ಅಭ್ಯಾಗತರಾಗಿ ಯಲ್ಲಾಪುರ ಸಂಕಲ್ಪ ಪ್ರಮೋದ ಹೆಗಡೆ, ಮಾಜಿ ಶಾಸಕ ವೈ. ಎಸ್. ವಿ. ದತ್ತಾ, ಹಿರಿಯ ಸಾಹಿತಿ ಸುಬ್ರಾಯ ಮತ್ತಿಹಳ್ಳಿ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸುಧೀರ್ ಗೌಡರ್ ಭಾಗವಹಿಸಲಿದ್ದಾರೆ.

ರಾತ್ರಿ 9.30 ರಿಂದ ಊರವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಯಕ್ಷಗಾನ ಪ್ರದರ್ಶನ ನಡೆಯಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ಸತೀಶ ದಂಟಕಲ್, ನಂದನ ದಂಟಕಲ್, ಮದ್ದಲೆಯಲ್ಲಿ ಗಣೇಶ ಭಟ್ ಮಣಗಾರ, ಚಂಡೆಯಲ್ಲಿ ರಘುಪತಿ ಹೂಡೆಹದ್ದ, ಭಾರ್ಗವ ಹೆಗ್ಗೋಡು ಸಹಕರಿಸಲಿದ್ದಾರೆ. ಈ ಎಲ್ಲಾ ವಿಷಯಗಳ ಬಗ್ಗೆ ಯುವಕ ಸಂಘದ ಅಧ್ಯಕ್ಷ ಗಣಪತಿ ಹೆಗಡೆ ಸುಳಗಾರ, ಕಾರ್ಯದರ್ಶಿ ಸಂಜಯ ಹೆಗಡೆ ಹುಲಿಮನೆ ವಿವರಿಸಿದರು.

ShareSendTweetShare
Previous Post

ಆಹಾ ಎಂಥ ಋಚಿ | ಸಿಹಿ ಖಾದ್ಯಕ್ಕೆ ಪ್ರೇಮಕ್ಕ.. ಖಾರ ತಿನಿಸಿದ ಜಲಜಕ್ಕ.. ಮರೆತ ಖಾದ್ಯ ನೆನಪಿಸಿದ ಆಶಕ್ಕ!

Next Post

ಸ್ಯಾಮಸಂಗ್ | ಮನೆಯಲ್ಲಿದ್ದ ಮೊಬೈಲ್ ಸ್ಪೋಟ!

Next Post

ಸ್ಯಾಮಸಂಗ್ | ಮನೆಯಲ್ಲಿದ್ದ ಮೊಬೈಲ್ ಸ್ಪೋಟ!

ಯಕ್ಷಶ್ರೀ | ಕಲಾವಿದರ ಸಮಾಗಮ.. ಜೊತೆಗೆ ಸನ್ಮಾನ!

ಕೆಲಸಕ್ಕೆ ಹೊರಟ ಚಾಲಕ ಕಾಲುವೆಗೆ ಬಿದ್ದು ಸಾವು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.