ಶಿರಸಿ: `ಸಲಾಮತ್ ಆರ್ಕನೆಟ್ ಟ್ರೇಡರ್ಸ’ ಮಳಿಗೆಯಲ್ಲಿ ದಾಸ್ತಾನು ಮಾಡಿದ್ದ ಎರಡು ಚೀಲ ಅಡಿಕೆ ಕಳ್ಳರ ಪಾಲಾಗಿದೆ. ಹಾರಿಸ್ ಖಾನ್ ಮಾಲಿಕತ್ವದ ಮಳಿಗೆಯ ಶೆಟರ್ಸ್ ಒಡೆದು ಕಳ್ಳರು ಅಡಿಕೆ ದೋಚಿದ್ದಾರೆ.
ಶಿರಸಿ ಕೆಳಗಿನಗುಡ್ಡದ ಹಾರಿಸ್ ಖಾನ್ (26) ಅಡಿಕೆ ವ್ಯಾಪಾರಿ. ಅವರು ಸಲಾಮತ್ ನಗರದಲ್ಲಿ `ಸಲಾಮತ್ ಆರ್ಕನೆಟ್ ಟ್ರೇಡರ್ಸ’ ಎಂಬ ಹೆಸರಿನ ಮಳಿಗೆ ಹೊಂದಿದ್ದರು. ಅಡಿಕೆ ಖರೀದಿ ನಂತರ ಇಲ್ಲಿ ಅವರು ಅದನ್ನು ಸಂಸ್ಕರಿಸುತ್ತಿದ್ದರು.
ಡಿ 24ರ ರಾತ್ರಿ 10.45ಕ್ಕೆ ಹಾರಿಸ್ ಖಾನ್ ಅವರು ತಮ್ಮ ಮಳಿಗೆಯ ಶಟರ್ಸ ಎಳೆದು ಬೀಗ ಹಾಕಿದ್ದರು. ಮರುದಿನ ಬೆಳಗ್ಗೆ ಬಂದು ನೋಡಿದಾಗ ಬೀಗ ಒಡೆದಿತ್ತು. ಶೆಟರ್ಸ ಒಳಗೆ ನುಗ್ಗಿದ ಕಳ್ಳರು ಅಲ್ಲಿದ್ದ ಎರಡು ಮೂಟೆ ಅಡಿಕೆ ಅಪಹರಿಸಿದ್ದರು. 40 ಕೆಜಿ ಹಾಗೂ 60 ಕೆಜಿ ತೂಗಿ ಇಟ್ಟುಕೊಂಡಿದ್ದ ಅಡಿಕೆ ಚೀಲ ನಾಪತ್ತೆಯಾಗಿದೆ.
`ಕಳ್ಳರನ್ನು ಹುಡುಕಿ.. ಅಡಿಕೆಯನ್ನು ಮರಳಿಸಿ’ ಎಂದು ಹಾರಿಸ್ ಖಾನ್ ಪೊಲೀಸ್ ದೂರು ನೀಡಿದ್ದಾರೆ.
#S News Digitel Advertisement: ನಿಮ್ಮ ಮಳಿಗೆ ಸುರಕ್ಷತೆಗಾಗಿ ಸಿಸಿ ಟಿವಿ ಅಳವಡಿಸಿ. ಸಿಸಿ ಟಿವಿ ಅಳವಡಿಕೆಗೆ ಇಲ್ಲಿ ಫೋನ್ ಮಾಡಿ: 6362189206