ಕಾರವಾರ: ರುಡ್‌ಸೆಟ್ ಸಂಸ್ಥೆ 30 ದಿನದಲ್ಲಿ ಮೊಬೈಲ್ ರಿಪೇರಿ ಕಲಿಸುತ್ತಿದೆ. ಈ ಕಲಿಕೆ ಉಚಿತ. ಊಟ-ವಸತಿಯ ವೆಚ್ಚವನ್ನು ಸಂಸ್ಥೆಯೇ ಪಾವತಿಸಲಿದೆ.
ಕೆನರಾ ಬ್ಯಾಂಕ್ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್
ಸಹಯೋಗದಲ್ಲಿ ಈ ಶಿಬಿರ ನಡೆಯಲಿದೆ. ಜನವರಿ 3ರಿಂದ ಈ ಕಲಿಕೆ ಶುರುವಾಗಲಿದೆ. 18ರಿಂದ 45 ವರ್ಷದೊಳಗಿನ ಕನ್ನಡ ಭಾಷೆ ಓದು-ಬರಹ ಬರುವವರು ಅರ್ಜಿ ಸಲ್ಲಿಸಬಹುದು. ಬಿಪಿಎಲ್ ಹಾಗೂ ಆಧಾರ್ ಕಾರ್ಡ ಕಡ್ಡಾಯ. ಡಿಸೆಂಬರ್ 31ಕ್ಕೆ ಅರ್ಜಿ ಸಲ್ಲಿಸಲು ಕೊನೆ ದಿನ.
ತರಬೇತಿ ಮುಗಿಸಿದವರಿಗೆ ಕೇಂದ್ರ ಸರ್ಕಾರದ ಪ್ರಮಾಣ ಪತ್ರ ಸಿಗಲಿದೆ. ಗ್ರಾಮೀಣಾಭಿವೃದ್ಧಿ ಸಚಿವಾಲಯ ಪ್ರಮಾಣ ಪತ್ರ ನೀಡಲಿದೆ. ಆಸಕ್ತರು ಇಲ್ಲಿ ಫೋನ್ ಮಾಡಿ: 9740982585