ಕಾರವಾರ: ಅಸ್ನೋಟಿಯ ಸಾಯಿಶ್ರೀ ನಾಯ್ಕ ಅವರು ಏರ್ ಫೋರ್ಸ್ ಫ್ಲೈಯಿಂಗ್ ಆಫಿಸರ್ ಹುದ್ದೆಗೆ ಆಯ್ಕೆಯಾಗಿದ್ದಾರೆ. ಊರಿನ ಹಿರಿಮೆ ಹೆಚ್ಚಿಸಿದ ಸಾಯಿಶ್ರೀ ನಾಯ್ಕ ಅವರಿಗೆ ಶಿವಾಜಿ ಶಿಕ್ಷಣ ಸಂಸ್ಥೆಯವರು ಸನ್ಮಾನಿಸಿದರು.
ಅಸ್ನೋಟಿಯ ರಾಮನಾಥ ದೇವಸ್ಥಾನ ಹಿಂದಿರುವ ಪುಟ್ಟ ಜೋಪಡಿಯಲ್ಲಿ ವಾಸಿಸಿದ ಸಾಯಶ್ರೀ ಗಾಂವ್ಕರ್ ಅವರು ಇದೀಗ ಇಡೀ ದೇಶವೇ ನೋಡುವ ಸಾಧನೆ ಮಾಡಿದ್ದಾರೆ. 23 ವರ್ಷದ ಅವರು ವಿಮಾನಗಿಂತಲೂ ಎತ್ತರಕ್ಕೆ ಏರ್ ಪೋರ್ಸ ಯುದ್ಧ ವಿಮಾನ ಹಾರಿಸಲಿದ್ದಾರೆ. ಕರಾಟೆ, ಎನ್ ಸಿ ಸಿ ಜೊತೆ ಓದುವಿಕೆಯಲ್ಲಿಯೂ ಮುಂದಿದ್ದ ಸಾಯಿಶ್ರೀ ವಾಣಿಜ್ಯ ವಿಮಾನ ಸಂಸ್ಥೆಯವರು ಕರೆದರೂ ಅಲ್ಲಿ ಉದ್ಯೋಗ ಬಯಸಿಲ್ಲ!
ಬಾಲ್ಯದಿಂದಲೂ ವಾಯುಪಡೆಯ ಫೈಲೆಟ್ ಆಗಬೇಕು ಎಂದು ಕನಸು ಕಂಡಿದ್ದ ಸಾಯಿಶ್ರೀ ಇದೀಗ ಅದನ್ನು ಸಾಧಿಸಿ ತೋರಿಸಿದ್ದಾರೆ. `ಬಡತನ ಎಂದು ಸಾಯಶ್ರೀ ಎಂದಿಗೂ ಕೊರಗಲಿಲ್ಲ. ಅವರ ಸಾಧನೆಗೆ ಬಡತನ ಅಡ್ಡಿಯಾಗಲು ಇಲ್ಲ’ ಎಂದು ಸಾಯಿಶ್ರೀ ಅವರನ್ನು ಹತ್ತಿರದಿಂದ ಬಲ್ಲ ಶಿಕ್ಷಣ ಗಣೇಶ ಬೀಷ್ಠಣ್ಣನವರ್ ಅಭಿಪ್ರಾಯ ಹಂಚಿಕೊAಡರು. ಗಣೇಶ ಅವರ ಪುತ್ರಿ ನಿಸರ್ಗ ಬೀಷ್ಠಣ್ಣನವರ ಅವರಿಗೂ ಸಾಯಶ್ರೀ ಮಾದರಿಯಾಗಿದ್ದರು. ಭರತನಾಟ್ಯ, ಕರಾಟೆ, ಅಬಾಕಸ್ ಸೇರಿ ಹಲವು ಬಗೆಯ ತರಬೇತಿಗಳಿಗೆ ಈ ಅವರಿಬ್ಬರು ಒಟ್ಟಿಗೆ ಹೋಗುತ್ತಿದ್ದರು.
ಈ ಎಲ್ಲಾ ಹಿನ್ನಲೆ ಶಿವಾಜಿ ವಿದ್ಯಾ ಮಂದಿರ, ನ್ಯೂ ಮಾಡೆಲ್ ಇಂಗ್ಲೀಷ್ ಸ್ಕೂಲ್ ಹಾಗೂ ಸದಾಶಿವಗಡದ ಲಯನ್ಸ ಕ್ಲಬ್ಬಿನವರು ಕಲ್ಲೂರ ಏಜ್ಯುಕೇಶನ್ ಟ್ರಸ್ಟಿನ ಸಹಯೋಗದಲ್ಲಿ ಸಾಯಿಶ್ರೀ ಅವರಿಗೆ ಗೌರವಿಸಿದರು. ಪ್ರೀಮಿಯರ್ ಗ್ರೂಪ್ ಕಾರವಾರದ ಸಂಸ್ಥಾಪಕ ದಿನಕರ ಸಾಳುಂಕೆ ಈ ವೇಳೆ ಸಾಯಿಶ್ರೀ ಅವರ ಸಾಧನೆಯನ್ನು ಕೊಂಡಾಡಿದರು. ಕಾರವಾರ ನಗರಾಭಿವೃದ್ಧಿ ಕೋಶದ ಇಂಜಿನಿಯರ್ ರವಿಕುಮಾರ್ ಕೆ ಎಂ, ಪ್ರಮುಖರಾದ ವಿನಯಾ ವಿ ನಾಯ್ಕ, ಶಿವಾನಂದ ನಾಯ್ಕ, ಇಬ್ರಾಹಿಂ ಕಲ್ಲೂರ, ನಾರಾಯಣ ದೇಸಾಯಿ ಈ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾಯಿಶ್ರೀ ಅವರ ತಾಯಿ ಕರುಣಾ ನಾಯ್ಕ ಮಾತುಗಳನ್ನು ಕೇಳಿ ನೆರೆದಿದ್ದವರು ಭಾವುಕರಾದರು. ಸನ್ಮಾನ ಸ್ವೀಕರಿಸಿದ ಸಾಯಿಶ್ರೀ ಸಹ ಬಾಲ್ಯದ ದಿನಗಳನ್ನು ಸ್ಮರಿಸಿದರು.
ಅಸ್ನೋಟಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಉಮೇಶ್ ಸಾಳುಂಕೆ, ಅಸ್ನೋಟಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಅಶ್ವಿನಿ ಮ್ಹಾಳ್ಸೇಕರ, ಪ್ರಮುಖರಾದ ಗಿರೀಶ್ ದೇಸಾಯಿ, ಶಶಿಕಾಂತ ಸಾಳುಂಕೆ, ಬಾಲಕೃಷ್ಣ ಸಾಳುಂಕೆ, ತನುಜಾ ಗುರುನಾಥ ನಾಯ್ಕ, ಆನಂದು ಸಾಳುಂಕೆ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ದಿಕ್ಷಾ ತಳೇಕರ ಸಂಗಡಿಗರು ಪ್ರಾರ್ಥಿಸಿದರು. ಸಂಜಯ ಜಿ ಸಾಳುಂಕೆ ಸ್ವಾಗತಿಸಿದರು.