ಭಟ್ಕಳ: ತಾಲೂಕು ಪಂಚಾಯತ ಕಚೇರಿ ಎದುರಿನ ಹಣ್ಣಿನ ಅಂಗಡಿ ಬೆಂಕಿಗೆ ಆಹುತಿಯಾಗಿದೆ. ಗುರುವಾರ ನಸುಕಿನಲ್ಲಿ ತಗುಲಿದ ಬೆಂಕಿಗೆ ಇಡೀ ಅಂಗಡಿ ಭಸ್ಮವಾಗಿದೆ.
ಮಾವಿನಕುರ್ವೆ ಪಂಚಾಯತ ವ್ಯಾಪ್ತಿಯ ತಲಗೋಡು ಗ್ರಾಮದ ಕೋಟೆಮನೆಯ ರಾಮಚಂದ್ರ ನಾಯ್ಕ ಅವರು ಇಲ್ಲಿ ತಾತ್ಕಾಲಿಕ ಮಳಿಗೆ ನಿರ್ಮಿಸಿಕೊಂಡಿದ್ದರು. ಅಲ್ಲಿ ಅವರು ಹಣ್ಣಿನ ವ್ಯಾಪಾರ ನಡೆಸಿ ಬದುಕು ಕಟ್ಟಿಕೊಂಡಿದ್ದರು. ಡಿ 26ರ ನಸುಕಿನ 2.30ಕ್ಕೆ ಅಂಗಡಿ ಹೊತ್ತಿ ಉರಿದಿದೆ.
ದ್ವೇಷಕ್ಕೆ ಉರಿದ ಅಂಗಡಿ
ಹಣ್ಣಿನ ಅಂಗಡಿಯ ಮಾಲಕನ ಮೇಲಿನ ದ್ವೇಷದಿಂದ ಮಳಿಗೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಅನುಮಾನ ವ್ಯಕ್ತವಾಗಿದೆ. 7 ಲಕ್ಷ ರೂ ಹಾನಿಯಾದ ಬಗ್ಗೆ ರಾಮಚಂದ್ರ ನಾಯ್ಕ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಹುಡುಕಾಟ ನಡೆಸಿದ್ದಾರೆ.