ಅಂಕೋಲಾ: ಸುಂಕಸಾಳ ಬಳಿ ನಡೆದ ಅಪಘಾತದಲ್ಲಿ ವಿದ್ಯಾರ್ಥಿಯೊಬ್ಬ ಸಾವನಪ್ಪಿದ್ದು, ವಿದ್ಯಾರ್ಥಿಗೆ ಗುದ್ದಿದ ಅಪರಿಚಿತ ವಾಹನಕ್ಕಾಗಿ ಪೊಲೀಸರು ಶೋಧ ನಡೆಸಿದ್ದಾರೆ.
ಡಿ 25ರ ಸಂಜೆ ಬೆಳಗಾವಿಯ ವಿನಾಯಕ ಮುಳ್ಳೂರು (27) ಅವರು ಯಲ್ಲಾಪುರದಿಂದ ಅಂಕೋಲಾ ಕಡೆ ಬೈಕಿನಲ್ಲಿ ಚಲಿಸುತ್ತಿದ್ದರು. ಸಂಜೆ 5 ಗಂಟೆ ವೇಳೆಗೆ ಅಪರಿಚಿತ ವಾಹನ ಅವರಿಗೆ ಡಿಕ್ಕಿಯಾಯಿತು. ಸುಂಕಸಾಳ ಬಳಿ ಬಿದ್ದಿದ್ದ ಅವರನ್ನು ಕೆಲವರು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆಸಿದರು. ಆದರೆ, ಪ್ರಯೋಜನವಾಗಿಲ್ಲ.
ಡಿಕ್ಕಿ ಹೊಡೆದ ವಾಹನ ಸವಾರ ಗಾಯಾಳುವಿಗೆ ಉಪಚರಿಸಿಲ್ಲ. ಆತ ಯಾರು? ಎಲ್ಲಿಯವ? ಯಾವ ವಾಹನ? ಎಂದು ಸಹ ಗೊತ್ತಾಗಿಲ್ಲ. ಆಸ್ಪತ್ರೆ ಸೇರುವ ಮೊದಲೇ ವಿನಾಯಕ ಮುಳ್ಳೂರು ಸಾವನಪ್ಪಿದ್ದು, ಸಂಜೆ 7 ಗಂಟೆ ಅವಧಿಗೆ ವೈದ್ಯರು ಸಾವನ್ನು ಖಚಿತಪಡಿಸಿದರು.