ಯಲ್ಲಾಪುರ: ದೇಶದ ನಾನಾ ಭಾಗದಲ್ಲಿ ಸಾಕಷ್ಟು ಕಳ್ಳತನ ನಡೆಸಿದರೂ ಸಿಕ್ಕಿ ಬೀಳದ ಮದ್ಯ ಪ್ರದೇಶದ ಅಮೀನ್ ಖಾನ್ ಯಲ್ಲಾಪುರದಲ್ಲಿ ಡೀಸೆಲ್ ಕದ್ದು ಜೈಲು ಸೇರಿದ್ದಾನೆ. ಕಳ್ಳತನಕ್ಕೆ ಸಹಕರಿಸಿದ ಆತನ ಸಹಾಯಕ ಗಜರಾಜ ಸಿಂಗ್’ಗೂ ಪೊಲೀಸರು ಜೈಲಿನ ದಾರಿ ಕಾಣಿಸಿದ್ದಾರೆ.
ಲಾರಿ ಚಾಲಕನಾಗಿರುವ ಅಮೀನ ಖಾನ್ ತನ್ನ ಲಾರಿ ಕ್ಲೀನರ್ ಗಜರಾಜ ಸಿಂಗ್ ನೆರವು ಪಡೆದು ಡಿಸೇಲ್ ಕದ್ದಿದ್ದ. ಮದ್ಯಪ್ರದೇಶದ ಆತ ಡಿ 21ರ ರಾತ್ರಿ ಹೊಸಳ್ಳಿ ಪೆಟ್ರೋಲ್ ಬಂಕಿನ ಬಳಿ ನಿಲ್ಲಿಸಿದ್ದ ಟ್ಯಾಂಕರ್’ನ ಮುಚ್ಚಳ ಒಡೆದಿದ್ದರು. ಕಳ್ಳತನ ನಡೆದ ಬಗ್ಗೆ ಟ್ಯಾಂಕರ್ ಚಾಲಕನಾದ ಗೌಳಿವಾಡದ ಭಾಗು ಪೊಂಡೆ ಎಂಬಾತರು ಪೊಲೀಸ್ ದೂರು ನೀಡಿದ್ದರು.
ತನಿಖೆ ನಡೆಸಿದ ಪೊಲೀಸರು ಅನುಮಾನಾಸ್ಪದ ವ್ಯಕ್ತಿಗಳ ವಿಚಾರಣೆ ನಡೆಸಿದರು. ಪ್ರಕರಣ ನಡೆದ ವಾರದೊಳಗೆ ಕಳ್ಳರಿಬ್ಬರನ್ನು ಪತ್ತೆ ಮಾಡಿದರು. ಅವರಿಂದ 28534 ರೂ ಮೌಲ್ಯದ ಡೀಸೆಲ್’ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.