ಸಿದ್ದಾಪುರ: ಸಾಗರದಿಂದ ಸಿದ್ದಾಪುರಕ್ಕೆ ಬರುತ್ತಿದ್ದ ಸರ್ಕಾರಿ ಬಸ್ಸು ಗೋಳಗೊಡ ಬಳಿ ಕಂದಕಕ್ಕೆ ಬಿದ್ದಿದೆ. 20 ಅಡಿ ಆಳಕ್ಕೆ ಬಸ್ಸು ಬಿದ್ದಿದ್ದು, ಮೂವರು ಗಾಯಗೊಂಡಿದ್ದಾರೆ.
ಗುರುವಾರ ಈ ಬಸ್ಸು ಸಾಗರದಿಂದ ಆಡುಕಟ್ಟ ಹಲಗೇರಿ ಮಾರ್ಗವಾಗಿ ಗೋಳಗೋಡ ತಲುಪಿತ್ತು. ಎಲ್ಲವೂ ಸರಿಯಾಗಿದ್ದರೆ ಈ ಬಸ್ಸು ಮುಂದೆ ಸಿದ್ದಾಪುರ ಬಸ್ ನಿಲ್ದಾಣಕ್ಕೆ ಬರಬೇಕಿತ್ತು. ಆದರೆ, ಗೋಳಗೋಡ ಬಳಿ ಬಸ್ಸು ಅಪಘಾತವಾಯಿತು.
ಈ ಬಸ್ಸಿನಲ್ಲಿ 30 ಪ್ರಯಾಣಿಕರಿದ್ದರು. ಆ ಪೈಕಿ ಮೂವರು ವಿದ್ಯಾರ್ಥಿಗಳು ಗಾಯಗೊಂಡರು. ಗಾಯಗೊಂಡವರನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರು. ಹೊಳೆಗೆ ಅಡ್ಡಲಾಗಿ ನಿರ್ಮಿಸಲಾದ ಸೇತುವೆ ಬಳಿಯ ಹಂಪನ್ನು ಬಸ್ಸು ಹಾರಿದ್ದು, ಈ ವೇಳೆ ಬಸ್ಸು ಚಾಲಕನ ನಿಯಂತ್ರಣ ತಪ್ಪಿದ ಬಗ್ಗೆ ಅಲ್ಲಿನವರು ಮಾಹಿತಿ ನೀಡಿದರು.