ಯಲ್ಲಾಪುರ: ಸವಿತಾ ಭಟ್ಟ ಅವರು ಕಳೆದುಕೊಂಡಿದ್ದ ಚಿನ್ನ ಹಾಗೂ ಹಣವನ್ನು ಪೊಲೀಸರು ಹುಡುಕಿ ಅವರಿಗೆ ಮರಳಿಸಿದ್ದಾರೆ.
ಯಲ್ಲಾಪುರ ಇಡಗುಂದಿಯ ಸವಿತಾ ಭಟ್ಟ ಅವರು ಡಿ 24ರಂದು ಯಲ್ಲಾಪುರ ಪಟ್ಟಣಕ್ಕೆ ಬಂದಿದ್ದರು. ಸಂಜೆ ಬಸ್ಸಿಗೆ ಮರಳುವ ಗಡಿಬಿಡಿಯಲ್ಲಿ ಅವರು ತಮ್ಮ ಪರ್ಸನ್ನು ಕಳೆದುಕೊಂಡಿದ್ದರು. ಪರ್ಸ ಕಳೆದ ಬಗ್ಗೆ ನಂತರ ಅವರ ಅರಿವಿಗೆ ಬಂದಿದ್ದು, ಬಸ್ ನಿಲ್ದಾಣದಲ್ಲಿ ಹುಡುಕಾಡಿದರು. ಆದರೆ, ಅಲ್ಲೆಲ್ಲಿಯೂ ಅವರಿಗೆ ಪರ್ಸ ಸಿಗಲಿಲ್ಲ.
ಕೂಡಲೇ ಯಲ್ಲಾಪುರ ಪೊಲೀಸ್ ಠಾಣೆಗೆ ತೆರಳಿ ಪರ್ಸ ಕಾಣೆಯಾದ ಬಗ್ಗೆ ದೂರು ನೀಡಿದರು. ಪರ್ಸಿನಲ್ಲಿ ಹಣ ಹಾಗೂ 50 ಸಾವಿರ ರೂ ಮೌಲ್ಯದ ಬಂಗಾರದ ಒಡವೆಯಿದ್ದ ಬಗ್ಗೆಯೂ ತಿಳಿಸಿದರು. ಸಿಸಿ ಕ್ಯಾಮರಾ ದಾಖಲೆ ಪರಿಶೀಲಿಸಿದ ಪೊಲೀಸರು ಪರ್ಸನ್ನು ಪತ್ತೆ ಮಾಡಿದರು.
ಗುರುವಾರ ಸವಿತಾ ಭಟ್ಟ ಅವರಿಗೆ ಫೋನ್ ಮಾಡಿ ಪೊಲೀಸ್ ಠಾಣೆಗೆ ಕರೆಯಿಸಿ ಪರ್ಸಿನ ಜೊತೆ ಅದರ ಒಳಗಿದ್ದ ವಸ್ತುಗಳನ್ನು ಒಪ್ಪಿಸಿದರು. ಪಿಎಸ್‌ಐ ಸಿದ್ದಪ್ಪ ಗುಡಿ ಪರ್ಸನ್ನು ವಾರಸುದಾರರಿಗೆ ಹಸ್ತಾಂತರಿಸಿದರು. ಬೆಲೆಬಾಳುವ ವಸ್ತುಗಳನ್ನು ಜೋಪಾನವಾಗಿರಿಸಿಕೊಳ್ಳುವಂತೆ ಕಿವಿಮಾತು ಹೇಳಿದರು. ಪೊಲೀಸರ ನಡೆಗೆ ಸವಿತಾ ಅವರ ಪತಿ ಗಜಾನನ ಭಟ್ಟ ಅವರು ಸಂತಸ ವ್ಯಕ್ತಪಡಿಸಿದರು.
ಪರ್ಸ ಸಿಕ್ಕ ಖುಷಿಯನ್ನು ಅವರ ಕುಟುಂಬದವರು ಹಂಚಿಕೊoಡ ವಿಡಿಯೋ ಇಲ್ಲಿ ನೋಡಿ..