ಕಾರವಾರ: ಸರ್ಕಾರ 20 ರೂಪಾಯಿಗೆ ಒಂದರoತೆ ಕೋಳಿ ವಿತರಿಸುತ್ತಿದೆ. ಆದರೆ, ಈ ಯೋಜನೆ ಮಹಿಳೆಯರಿಗೆ ಮಾತ್ರ!
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಮಹಿಳೆಯರಿಗೆ 20 ರೂ ದರದಲ್ಲಿ ಕೋಳಿ ಮರಿ ವಿತರಿಸಲು ಮುಂದಾಗಿದೆ. ಮೊಟ್ಟೆಯಿಂದ ಹೊರ ಬಂದು ಐದು ವಾರ ಕಳೆದ ಕೋಳಿ ಮರಿಗಳನ್ನು ನೀಡಲಾಗುತ್ತಿದೆ. ಗ್ರಾಮೀಣ ಭಾಗದ ಪರಿಶಿಷ್ಟ ವರ್ಗದವರ ಜೊತೆ ಸಾಮಾನ್ಯ ವರ್ಗದ ರೈತ ಮಹಿಳೆಯರು ಸಹ 20 ರೂ ಪಾವತಿಸಿ ಈ ಕೋಳಿ ಮರಿಗಳನ್ನು ಪಡೆಯಬಹುದು.
ಕೋಳಿ ಮರಿ ಬೇಕಾದವರು ಜ 8ರ ಒಳಗೆ ತಾಲೂಕಿನ ಪಶು ವೈದ್ಯಾಧಿಕಾರಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ನಮೂನೆ ಸಹ ತಾಲೂಕು ಪಶು ಆಸ್ಪತ್ರೆಯಲ್ಲಿ ಸಿಗುತ್ತದೆ. ಕೋಳಿ ಸಾಕಾಣಿಕೆ ನಡೆಸಲು ಆಸಕ್ತಿ ಇದ್ದವರಿಗೆ ಈ ಯೋಜನೆ ಸಹಕಾರಿ.