ಕುಮಟಾ: ಕಂದಾಯ ಇಲಾಖೆ ಎದುರು ಜೂಜಾಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಗೋಕರ್ಣ ಮೇಲಿನಕೇರಿಯ ರಸ್ತೆ ಬದಿ ಅಂದರ್ ಬಾಹರ್ ಆಡುತ್ತಿದ್ದ ನಾಲ್ವರನ್ನು ಪೊಲೀಸ್ ನಿರೀಕ್ಷಕ ಶಶಿಧರ್ ಕೆ ಎಚ್ ವಶಕ್ಕೆ ಪಡೆದಿದ್ದಾರೆ.
ಡಿ 25ರ ರಾತ್ರಿ ಕುಮಟಾ ಕಡಿಮೆ ಬಳಿಯ ರಿಕ್ಷಾ ಚಾಲಕ ಲಕ್ಷಿನಾರಾಯಣ ಗೌಡ ತನ್ನ ಸಹಚರರ ಜೊತೆ ಇಸ್ಪಿಟ್ ಆಡುತ್ತಿದ್ದರು. ಕುಮಟಾ ತಳಗೇರಿಯ ರಿಕ್ಷಾ ಚಾಲಕ ದಾಮೋದರ ಗೌಡ, ಬಂಡಗೇರಿಯ ಗೌಂಡಿ ಹೊನ್ನಪ್ಪ ಗೌಡ ಜೊತೆ ಕುಡ್ಲೆಯ ದೇವು ಗೌಡ ಸಹ ಇಸ್ಪೀಟ್ ಆಡಲು ಹಣ ಕಟ್ಟಿದ್ದರು.
ಮೇಲಿನಕೇರಿ ಕಂದಾಯ ಇಲಾಖೆ ಎದುರು ರಸ್ತೆ ಅಂಚಿನಲ್ಲಿ ಕುಳಿತು ಹಣ ಹರಡಿಕೊಂಡಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದರು. ಅಲ್ಲಿದ್ದ ಇಸ್ಪೀಟ್ ಎಲೆಗಳ ಜೊತೆ 6120ರೂ ಹಣ, ಅವರ ಬಳಿಯಿದ್ದ ಮೊಬೈಲ್’ನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಒಪ್ಪಿಸಿದರು.
ಜೂಜಾಡುತ್ತಿದ್ದ ನಾಲ್ವರ ವಿರುದ್ಧವೂ ಪೊಲೀಸ್ ಪ್ರಕರಣ ದಾಖಲಾಗಿದೆ.



