ಅಂಕೋಲಾ: ವಂದಿಗೆಯ ಅಯ್ಯಪ್ಪ ಸ್ವಾಮಿ ಪೂಜೆ ಅಂಗವಾಗಿ ಡಿ 27ರ ಶುಕ್ರವಾರ ರಾತ್ರಿ 9.30ಕ್ಕೆ `ಗಣೇಶ ಯಕ್ಷಗಾನ ಮಂಡಳಿ’ಯ ಬಾಲ ಕಲಾವಿದರಿಂದ ‘ರುಕ್ಮಿಣಿ ಸ್ವಯಂವರ’ ಮತ್ತು ‘ಧರ್ಮಾಂಗದ ದಿಗ್ವಿಜಯ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಉಳವರೆಯ ಇಂದ್ರ ಗೌಡ ಅವರ ರಂಗಸಜ್ಜಿಕೆಯಲ್ಲಿ ಸಂಪೂರ್ಣ ಪುಟಾಣಿ ಕಲಾವಿದರಿಂದ ಅಭಿನಯಿಸಲ್ಪಡುವ ಯಕ್ಷಗಾನದ ಭಾಗವತರಾಗಿ ರಮೇಶ ಗೌಡ ಕೋವೆ ಹಾಗೂ ಸಂಗಡಿಗರ ಹಿಮ್ಮೇಳದಲ್ಲಿರಲಿದ್ದಾರೆ. ಮಹಿಳಾ ವೇಷಧಾರಿಯಾಗಿ ಪ್ರಣೀತಾ ಮಂಜುನಾಥ ವಂದಿಗೆ, ಬಾಲ ಗೋಪಾಲರಾಗಿ ಭಾರ್ಗವಿ ವಿನಾಯಕ ವಂದಿಗೆ ಹಾಗೂ ಪ್ರಾರ್ಥನಾ ವಂದಿಗೆ ಪಾತ್ರವಹಿಸಲಿದ್ದಾರೆ.
ಪ್ರಮುಖ ಪಾತ್ರವರ್ಗದಲ್ಲಿ ರಾಜು ಎಲ್ ವಂದಿಗೆ, ಮಹೇಶ ಎಚ್ ವಂದಿಗೆ, ನಾರಾಯಣ ವಂದಿಗೆ, ಶ್ರೀನಿವಾಸ ಬಿ ವಂದಿಗೆ, ಸಂತೋಷ ವೈ ವಂದಿಗೆ, ಸಂದೀಪ ವಂದಿಗೆ, ಮನೋಜ್ ವಂದಿಗೆ, ಕುಮಾರ ಪನ್ನಗ ವಂದಿಗೆ, ಪವನ್ ವಂದಿಗೆ, ಸಾಗರ ವಂದಿಗೆ, ಅಭಿಷೇಕ್ ವಂದಿಗೆ, ಅನೂಪ ವಂದಿಗೆ, ಶ್ವೇತಾ ಸಂತೋಷ್ ವಂದಿಗೆ, ಪ್ರತಿಭಾ ಶೈಲೇಶ್ ವಂದಿಗೆ, ಬಬೀತಾ ಸಂತೋಷ ವಂದಿಗೆ, ಕೀರ್ತಿ ರಾಮಕಾಂತ ವಂದಿಗೆ, ಶ್ವೇತಾ ಅಮದಳ್ಳಿ ಅಭಿನಯಿಸಲಿದ್ದಾರೆ.
ಯಕ್ಷಗಾನ ಮಂಡಳಿಯ ವ್ಯವಸ್ಥಾಪಕ ಶ್ರೀನಿವಾಸ ವಂದಿಗೆ ಹಾಗೂ ಶೈಲೇಶ ಪಿ. ವಂದಿಗೆ ಯಕ್ಷಗಾನ ಸಂಘಟಿಸಿದ್ದಾರೆ.