ಕುಮಟಾ: ಸುಭಾಷ್ ರಸ್ತೆಯ ಇಂಡಿಯನ್ ಹಾರ್ಡವೇರ್ ಅಂಗಡಿ ರಸ್ತೆ ತಿರುವಿನಲ್ಲಿ ಲಾರಿ ಹಾಗೂ ಕಾರಿನ ನಡುವೆ ಅಪಘಾತವಾಗಿದೆ. ದತ್ತಾ ನಾಯಕ ಅವರು ಚಲಾಯಿಸುತ್ತಿದ್ದ ಕಾರಿಗೆ ಕೌಲೇಶ್ವರ್ ಸಾವ್ ಎಂಬಾತ ಲಾರಿ ಗುದಿದ್ದಾನೆ.
ಕುಮಟಾ ವನಳ್ಳಿಯ ಶಿಕ್ಷಕ ದತ್ತಾ ನಾಯಕ ಅವರು ಡಿ 26ರಂದು ಸುಭಾಷ್ ರಸ್ತೆಯಲ್ಲಿ ಕಾರು ಓಡಿಸುತ್ತಿದ್ದರು. ವನಳ್ಳಿ ಕಡೆಯಿಂದ ಇಂಡಿಯನ್ ಹಾರ್ಡವೇರ್ ಕಡೆ ಅವರು ಕಾರು ಚಲಾಯಿಸುತ್ತಿದ್ದಾಗ ಅವರ ಕಾರಿಗೆ ಲಾರಿ ಗುದ್ದಿದೆ.
ರಸ್ತೆ ಅಂಚಿನಲ್ಲಿ ಲಾರಿ ನಿಲ್ಲಿಸಿಕೊಂಡಿದ್ದ ಜಾರ್ಖಂಡದ ಲಾರಿ ಚಾಲಕ ಕೌಲೇಶ್ವರ್ ಸಾವ್ ಏಕಾಏಕಿ ಲಾರಿ ಚಾಲು ಮಾಡಿದ್ದು, ಅದನ್ನು ವೇಗವಾಗಿ ಚಲಾಯಿಸಿ ಕಾರಿಗೆ ಗುದ್ದಿದ್ದಾನೆ. ಕಾರು ಜಖಂ ಆಗಿದೆ.