ಅಂಕೋಲಾ: ಮರದ ಹಲಿಗೆಗಳನ್ನು ಸಾಗಿಸುತ್ತಿದ್ದ ಲಾರಿ ವಿದ್ಯುತ್ ಕಂಬಕ್ಕೆ ಗುದ್ದಿದ್ದರಿಂದ ಹಲಿಗೆಗಳ ಜೊತೆ ವಿದ್ಯುತ್ ಕಂಬಕ್ಕೆ ಸಹ ಹಾನಿಯಾಗಿದೆ.
ಅಂಕೋಲಾ ಯಲ್ಲಾಪುರ ಹೆದ್ದಾರಿಯಲ್ಲಿ ಡಿ 26ರಂದು ಈ ಲಾರಿ ಚಲಿಸುತ್ತಿತ್ತು. ಹೊನ್ನಳ್ಳಿ ಬಳಿ ಲಾರಿ ಚಾಲಕನ ನಿಯಂತ್ರಣ ತಪ್ಪಿತು. ಪರಿಣಾಮ ಅಲ್ಲಿದ್ದ ವಿದ್ಯುತ್ ಕಂಬಕ್ಕೆ ಲಾರಿ ಗುದ್ದಿ ಪಲ್ಟಿಯಾಯಿತು.
ಲಾರಿ ಓಡಿಸುತ್ತಿದ್ದ ಧಾರವಾಡದ ನಿಂಗಪ್ಪ ಕಡದಳ್ಳಿ ಜೊತೆ ಬೆಳಗಾವಿ ಮೂಲದ ಕ್ಲಿನರ್ ಮುತ್ತಪ್ಪ ಮಾದರ್ ಸಹ ಈ ಅಪಘಾತದಲ್ಲಿ ಗಾಯಗೊಂಡರು. ಲಾರಿ ಚಾಲಕನ ದುಡುಕುತನದಿಂದ ಅಪಘಾತ ನಡೆದ ಬಗ್ಗೆ ಹುಬ್ಬಳ್ಳಿಯಲ್ಲಿ ಟ್ರಾನ್ಸಪೋರ್ಟ ವ್ಯವಹಾರ ನಡೆಸುವ ಜೀವಿದ್ ಪೊಲೀಸ್ ದೂರು ನೀಡಿದ್ದಾರೆ.