ಮುಂಡಗೋಡ: ನಾಯಿಗಳ ಆಹಾರಕ್ಕಾಗಿ ಬೇಯಿಸುತ್ತಿದ್ದ ಗಂಜಿ ಬೋಗಣಿಗೆ ಬಿದ್ದು 2 ವರ್ಷದ ಮಗು ಸಾವನಪ್ಪಿದೆ.
ಮುಂಡಗೋಡದ ಚಳಗೇರಿಯಲ್ಲಿ ಬೀರು ಲಂಬೋರ ಅವರು ಸಾಕಿದ್ದ ನಾಯಿಗಳಿಗೆ ನೀಡಲು ಡಿ 26ರ ಸಂಜೆ ಗಂಜಿ ಬೇಯಿಸುತ್ತಿದ್ದರು. ಈ ವೇಳೆ ಅಲ್ಲಿ ಆಟವಾಡುತ್ತಿದ್ದ ಅವರ 2 ವರ್ಷದ ಮಗ ಕೃಷ್ಣ ಲಂಬೋರ್ ಕುದಿಯುತ್ತಿದ್ದ ಗಂಜಿ ಬೊಗಣಿಯಲ್ಲಿ ಬಿದ್ದು ಮೈ ಸುಟ್ಟುಕೊಂಡರು.
ತಕ್ಷಣ ಅವರನ್ನು ಮುಂಡಗೋಡಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್’ಗೆ ದಾಖಲು ಮಾಡಲಾಯಿತು. ಆದರೆ, ಪ್ರಯೋಜನವಾಗಲಿಲ್ಲ.
ಶನಿವಾರ ಬೆಳಗ್ಗೆ ಕೃಷ್ಣ ಲಂಬೋರ್ ಸಾವನಪ್ಪಿದ ಬಗ್ಗೆ ವೈದ್ಯರು ತಿಳಿಸಿದರು.