ಶಾನವಳ್ಳಿಯ ನಾಗರಾಜ ಭಟ್ಟ ಅವರು ಮೂರು ವರ್ಷದ ಹಿಂದೆ ತಮ್ಮ ತೋಟಕ್ಕೆ ಸೋಲರ್ ಆಧಾರಿತ ಸಿಸಿ ಕ್ಯಾಮರಾ ಹಾಕಿಸಿದ್ದರು. ಈವರೆಗೆ ಒಮ್ಮೆಯೂ ಅದು ಕೈ ಕೊಟ್ಟಿಲ್ಲ!
ಕುಂತ್ರೆಬೈಲ್’ನ ಗಜಾನನ ಹೆಗಡೆ ಅವರು ತಮ್ಮ ಮನೆ ಮಾಳಿಗೆ ಮೇಲೆ ಸೋಲಾರ್ ಆಧಾರಿತ ಸಿಸಿ ಕ್ಯಾಮರಾ ಅಳವಡಿಸಿದ್ದರು. ಈಗಲೂ ಮನೆಯ ನಾಲ್ಕು ದಿಕ್ಕುಗಳಲ್ಲಿನ ಆಗು-ಹೋಗುಗಳ ಬಗ್ಗೆ ಅವರು ಮೊಬೈಲ್’ನಲ್ಲಿಯೇ ನೋಡುತ್ತಾರೆ.
ಸಿದ್ದಾಪುರದ ಅರುಣ ಶಾಂತರಾಜ್ ಅವರ ಹೊಲದಲ್ಲಿ ಕರೆಂಟ್ ಇಲ್ಲ. ವೈಫೈ ಸಿಗ್ನಲ್ ಸಹ ಸಿಗಲ್ಲ. ಕಾಡುಪ್ರಾಣಿ ಹಾವಳಿ ತಡೆಗಾಗಿ ಅವರು ಸೋಲಾರ್ ಸಿಸಿ ಕ್ಯಾಮರಾ ಹಾಕಿಸಿದ್ದು, ಪ್ರಾಣಿಗಳು ಹೊಲಕ್ಕೆ ಬಂದ ತಕ್ಷಣ ಕ್ಯಾಮರಾ ಸದ್ದು ಮಾಡುತ್ತಿದೆ!
ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳಿಯೂ ಶಿರಸಿಯ ಅಂಬಿಕಾ ಎಲೆಕ್ಟಿಕಲ್ ಅವರು ಸೋಲಾರ್ ಆಧಾರಿತ ಸಿಸಿ ಕ್ಯಾಮರಾ ಅಳವಡಿಸುತ್ತಾರೆ. ಗ್ರಾಮೀಣ ಭಾಗದ ಮೂಲೆ ಮೂಲೆಗೂ ತೆರಳಿ ಸೇವೆ ಒದಗಿಸುತ್ತಾರೆ. ಸಣ್ಣ ಸಣ್ಣ ಅಂಗಡಿಗಳಿoದ ಹಿಡಿದು ದೊಡ್ಡ ದೊಡ್ಡ ಮಳಿಗೆಯವರು ಸಹ ಈ ಕ್ಯಾಮರಾ ಅಳವಡಿಸಿದ್ದು, ಒಂದು ವರ್ಷದ ಅವಧಿಯ ವಾರಂಟಿಯನ್ನು ಅವರು ನೀಡುತ್ತಾರೆ. ಕಳ್ಳರ ಕಾಟ, ವನ್ಯಜೀವಿ ಉಪಟಳ, ಅಪರಿಚಿತರ ಆಗಮನ, ಅಪರಾಧ ತಡೆ ಸೇರಿ ಎಲ್ಲಾ ಬಗೆಯ ಭೀತಿಯನ್ನು ಈ ಕ್ಯಾಮರಾ ದೂರ ಮಾಡುತ್ತಿದೆ.
`ಇನ್ನೂ ಸೋಲಾರ್ ಆಧಾರಿತ ಸಿಸಿ ಕ್ಯಾಮರಾಗೆ ಪದೇ ಪದೇ ನಿರ್ವಹಣೆ ಬೇಕಾಗಿಲ್ಲ. ದುಬಾರಿ ಖರ್ಚು ಅದಕ್ಕಿಲ್ಲ. ನೆಟ್‌ವರ್ಕ ಪ್ರದೇಶದಲ್ಲಿ ಕ್ಯಾಮರಾವಿರಿಸಿ ಸಿಮ್ ಅಳವಡಿಸಿದರೆ ನಿಮ್ಮ ಕೆಲಸ ಮುಗೀತು. ನಂತರ ಎಲ್ಲಿ ಬೇಕಾದರೂ ಕುಳಿತು ಕ್ಯಾಮರಾ ಮುಂದಿನ ದೃಶ್ಯಾವಳಿ ನೋಡಲು ಸಾಧ್ಯ. ನೆಟ್‌ವರ್ಕ ಬಾರದ ಪ್ರದೇಶದಲ್ಲಿಯೂ ಕ್ಯಾಮರಾ ಕೆಲಸ ಮಾಡುತ್ತದೆ. ಹಗಲಿನಲ್ಲಿ ಮಾತ್ರವಲ್ಲದೇ ರಾತ್ರಿ ವೇಳೆಯಲ್ಲಿಯೂ ಈ ಕ್ಯಾಮರಾ ಸ್ಪಷ್ಟವಾಗಿ ಕೆಲಸ ಮಾಡುತ್ತದೆ’ ಎಂದು ಅಭಿಷೇಕ ನಾಯ್ಕ ತಿಳಿಸಿದರು.
`ಕುಳಿತ ಸ್ಥಳದಿಂದಲೇ ಕ್ಯಾಮರಾವನ್ನು ಯಾವ ದಿಕ್ಕಿಗೆ ಬೇಕಾದರೂ ತಿರುಗಿಸಬಹುದು. ಕ್ಯಾಮರಾ ಮುಂದಿರುವ ವ್ಯಕ್ತಿ ಜೊತೆ ನೇರವಾಗಿ ಮಾತನಾಡಬಹುದು. ಅಗತ್ಯಬಿದ್ದಾಗ ಅಲರ್ಟ ಮೆಸೇಜ್ ರವಾನಿಸಹುದು. ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ಮನೆ-ತೋಟದ ಸುರಕ್ಷತೆಯನ್ನು ಸದಾ ಕಾಪಾಡಬಹುದು. ಒಂದೇ ಒಂದು ಕ್ಯಾಮರಾದಿಂದ ಹಲವು ಬಗೆಯ ಪ್ರಯೋಜನಗಳಿವೆ’ ಎಂದು ರಾಕೇಶ ನಾಯ್ಕ ವಿವರಿಸಿದರು.
ಅಂಬಿಕಾ ಎಲೆಕ್ಟಿಕಲ್ ಮಳಿಗೆಯವರು ಕಟ್ಟಡಗಳ ವೈಯರಿಂಗ್, ಫ್ಯಾನ್-ಪಂಪ್ ರಿಪೇರಿ ಸೇರಿ ಎಲ್ಲಾ ಬಗೆಯ ಎಲೆಕ್ಟಿçಕಲ್ ಕೆಲಸವನ್ನು ಮಾಡುತ್ತಾರೆ. ಸಿಸಿ ಕ್ಯಾಮರಾ ಅಳವಡಿಕೆ ಸೇರಿ ಅವರ ಸೇವೆ ಅಗತ್ಯವಿದ್ದವರು ಇಲ್ಲಿ ಫೋನ್ ಮಾಡಿ: 6362189206
# Sponsored