ಮುಂಡಗೋಡ: ಮನೆ ಬಾಗಿಲಿಗೆ ಬಂದು ಏಳೆಂಟು ಜನ ದಾಂಧಲೆ ನಡೆಸಿದ್ದರಿಂದ ಬೇಸರಗೊಂಡ ಪ್ರಶಾಂತ ಪಾಟೀಲ ವಿಷ ಕುಡಿದು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಅವರನ್ನು ಹುಬ್ಬಳ್ಳಿಯ ಕಿಮ್ಸ್’ಗೆ ದಾಖಲಿಸಿದ್ದು, ಇದೀಗ ಅವರು ಚೇತರಿಸಿಕೊಂಡಿದ್ದಾರೆ.
ಮುoಡಗೋಡ ಹುನಗುಂದದ ಪ್ರಶಾಂತ ಪಾಟೀಲ ಅವರು ಗ್ರಾಮ ಪಂಚಾಯತವೊoದರಲ್ಲಿ ತಾತ್ಕಾಲಿಕ ನೌಕರಿ ಮಾಡುತ್ತಾರೆ. ಕಷ್ಟ ಕಾಲದಲ್ಲಿ ಅವರು ಪರಿಚಿತರೊಬ್ಬರ ಬಳಿ ಕಾಸು ಪಡೆದಿದ್ದು, ಸಮಯಕ್ಕೆ ಸರಿಯಾಗಿ ಅದರ ಮರುಪಾವತಿ ಸಾಧ್ಯವಾಗಿರಲಿಲ್ಲ. ಇದೇ ಕಾರಣಕ್ಕೆ ಡಿ 29ರಂದು ಎಳೆಂಟು ಜನ ಅವರ ಮನೆಗೆ ಬಂದು ಕೆಟ್ಟದಾಗಿ ನಿಂದಿಸಿದ್ದರು.
ಆ ಗುಂಪಿನಲ್ಲಿ ಒಬ್ಬರಾಗಿದ್ದ ಅಗಡಿಯ ನವಿನ್ ಜೈನ್ ಈ ವೇಳೆ ಪ್ರಶಾಂತ ಪಾಟೀಲ ಅವರಿಗೆ ಕೆನ್ನೆಗೆ ಬಾರಿಸಿದರು. `ಹಣ ಕೊಡದೇ ಇದ್ದರೆ ಜೀವಸಹಿತ ಬಿಡುವುದಿಲ್ಲ’ ಎಂದು ಬೆದರಿಕೆಯನ್ನು ಒಡ್ಡಿದರು. ಎಲ್ಲರ ಮುಂದೆ ಅವಮಾನ ಆಗಿದನ್ನು ಸಹಿಸದ ಪ್ರಶಾಂತ ಪಾಟೀಲ ವಿಷ ಕುಡಿದರು.
ಇದನ್ನು ಗಮನಿಸಿದ ರತ್ನವ್ವ ಪಾಟೀಲ ಅವರು ಅಸ್ವಸ್ಥಗೊಂಡ ಪ್ರಶಾಂತ ಪಾಟೀಲರನ್ನು ಆಸ್ಪತ್ರೆಗೆ ದಾಖಲಿಸಿದರು. ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಗೆ ಕರೆದೊಯ್ದರು. ಕಿಮ್ಸ್ ಆಸ್ಪತ್ರೆಯಲ್ಲಿ ಪ್ರಶಾಂತ ಪಾಟೀಲ ಚೇತರಿಸಿಕೊಂಡರು. ಮಗನಿಗೆ ಅವಮಾನ ಮಾಡಿದವರ ವಿರುದ್ಧ ರತ್ನವ್ವ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.