ಕಾರವಾರ: ಶಿರವಾಡ ರೈಲು ನಿಲ್ದಾಣದ ಕಡೆ ಚಲಿಸುತ್ತಿದ್ದ ರಿಕ್ಷಾ ಎರಡು ಬೈಕಿಗೆ ಗುದ್ದಿದೆ. ಪರಿಣಾಮ ಮೂರು ವಾಹನದಲ್ಲಿ ಸಂಚರಿಸುತ್ತಿದ್ದ ಏಳು ಜನ ಗಾಯಗೊಂಡಿದ್ದಾರೆ.
ಡಿ 29ರ ರಾತ್ರಿ ಕಾರವಾರ ಕೋಡಿಬೀರ ದೇವಾಲಯದ ಬಳಿಯ ಜಾಕೀರ ಶೇಖ್ ಶಿರವಾಡ ಕಡೆ ತಮ್ಮ ರಿಕ್ಷಾ ಓಡಿಸುತ್ತಿದ್ದರು. ಶಿರವಾಡ ಮಾರುತಿ ದೇವಾಲಯ ಬಳಿ ರಿಕ್ಷಾದ ವೇಗ ಹೆಚ್ಚಿಸಿದ ಅವರು ಮುಂದಿದ್ದ ಎಂ 80 ಸ್ಕೂಟರ್ ಹಿಂದಿಕ್ಕಿ ಎದುರಿನಿಂದ ಬಂದ ಬೈಕಿಗೆ ಅವರು ತಮ್ಮ ವಾಹನ ಗುದ್ದಿದರು. ಇದರಿಂದ ಆ ಬೈಕಿನಲ್ಲಿದ್ದ ವೆಂಕಟೇಶ ಬಾದಾಮಿ ರಸ್ತೆ ಮೇಲೆ ಬಿದ್ದು ಗಾಯಗೊಂಡರು.
ವೆoಕಟೇಶ್ ಅವರ ಬೈಕಿಗೆ ಗುದ್ದಿದ ರಿಕ್ಷಾ ನಂತರ ಎಡಕ್ಕೆ ತಿರುವಿ ಎಂ 80 ಸ್ಕೂಟರ್ ಓಡಿಸುತ್ತಿದ್ದ ಕಿನ್ನರದ ತೇನಾಜಿ ರಾಣೆ ಅವರಿಗೆ ರಿಕ್ಷಾ ಗುದ್ದಿದರು. ತೇನಾಜಿ ರಾಣೆ ಅವರ ಜೊತೆ ಆ ಸ್ಕೂಟರಿನಲ್ಲಿ ಸಂಚರಿಸುತ್ತಿದ್ದ ಕಮಲಕಾಂತ ಬಾಂದೇಕರ್ ಸಹ ಗಾಯಗೊಂಡರು.
ಇದಾದ ನಂತರ ಆ ರಿಕ್ಷಾವನ್ನು ಸಹ ಜಾಕೀರ ಶೇಖ್ ಪಲ್ಟಿ ಮಾಡಿದ್ದು, ರಿಕ್ಷಾ ಒಳಗೆ ಕುಳಿತಿದ್ದ ಅನುಪಮಾ ನಾಯಕ, ರಾಜೇಶ ನಾಯಕ ಅವರಿಗೂ ಪೆಟ್ಟಾಯಿತು. ಜೊತೆಗೆ ಜಾಕೀರ್ ಶೇಖ್ ಸಹ ಸಣ್ಣ ಪ್ರಮಾಣದಲ್ಲಿ ಗಾಯಗೊಂಡರು. ಈ ಎಲ್ಲಾ ಘಟನಾವಳಿಗಳಿಂದ ಸಿಟ್ಟಾದ ತೇನಾಜಿ ರಾಣೆ ತಮ್ಮ ಎಂ 80 ಜಖಂ ಮಾಡಿದ ಜಾಕೀರ್ ಶೇಖ್ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿದರು.



