ದಾಂಡೇಲಿ: ಕಟಿಂಗ್ ಶಾಫಿನಲ್ಲಿ ಕೆಲಸ ಮಾಡುವ ಮಹಮದ್ ಅಲಿ ಸ್ನಾನಕ್ಕೆ ಹೋದಾಗ ಬಾತ್ ರೂಂ’ನೊಳಗೆ ಬಿದ್ದು ಸಾವನಪ್ಪಿದ್ದಾರೆ.
ಉತ್ತರ ಪ್ರದೇಶದ ಮಹಮದ್ ಅಲಿ (27) ದಾಂಡೇಲಿಯ ಚೆನ್ನಮ್ಮ ಸರ್ಕಲ್ ಬಳಿಯ ಉಮರಖಾನ್ ತಡಗೋಡ ಅವರ ಮನೆಯಲ್ಲಿ ವಾಸವಾಗಿದ್ದರು. ಇಲ್ಲಿನ ಕಟಿಂಗ್ ಶಾಫಿನಲ್ಲಿ ಅವರು ಕಾರ್ಮಿಕರಾಗಿದ್ದರು.
ಸೋಮವಾರ ಸ್ನಾನ ಮಾಡಲು ಬಾತ್ ರೂಂ ಒಳಗೆ ಪ್ರವೇಶಿಸಿದ ಅವರು ಎಷ್ಟು ಹೊತ್ತಾದರೂ ಹೊರಗೆ ಬರಲಿಲ್ಲ. ಬಾತ್ ರೂಂ ಒಳಗೆ ಬಿದ್ದಿದ್ದ ಮಹಮದ್’ರನ್ನು ನೋಡಿದ ಶಾರುಕ್ ಸದ್ದಾಂ 108ಗೆ ಫೋನ್ ಮಾಡಿದರು. ಆಸ್ಪತ್ರೆಯ ವೈದ್ಯರು ಮಹಮದ್ ಅಲಿ ಸಾವನ್ನು ಖಚಿತಪಡಿಸಿದರು.
ಪಿಡ್ಸ ರೋಗದಿಂದ ಬಳಲುತ್ತಿದ್ದ ಅವರು ಇದೇ ರೋಗದಿಂದ ಸಾವನಪ್ಪಿದ ಅನುಮಾನಗಳಿವೆ.