ಶಿರಸಿ: ಒಂದು ವಾರದಿಂದ ತಂಡಿ-ಜ್ವರದಿAದ ಬಳಲುತ್ತಿದ್ದ ರಾಜು ಆರೇರ್ ಕಾಡಿನ ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ಸಾವನಪ್ಪಿದ್ದಾರೆ.
ಶಿರಸಿ ದೊಡ್ನಳ್ಳಿಯ ನರಬೈಲ್’ನ ರಾಜು ಆರೇರ್ (45) ಸೊಂಟ ನೋವಿನಿಂದ ಬಳಲುತ್ತಿದ್ದರು. ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದ ಅವರು ಸರಾಯಿಯನ್ನು ಸಹ ಸೇವಿಸುತ್ತಿದ್ದರು. ಕಳೆದ ಒಂದು ವಾರದಿಂದ ಜ್ವ-ತಂಡಿ ಎಂದು ಬಳಲಿದ್ದರು. ಎಲ್ಲಿಯೂ ಕೆಲಸ ಸಿಗದ ಕಾರಣ ಮನೆಯಲ್ಲಿದ್ದರು.
ಅನಾರೋಗ್ಯ, ಕೆಲಸ ಇಲ್ಲದಿರುವಿಕೆ ಸೇರಿ ನಾನಾ ಕಾರಣದಿಂದ ಅವರು ನೊಂದಿದ್ದರು. ಈ ಬಗ್ಗೆ ಬೇಸರವನ್ನು ವ್ಯಕ್ತಪಡಿಸಿದ್ದರು. ಡಿ 29ರ ರಾತ್ರಿ ಮನೆಯಲ್ಲಿದ್ದ ಅವರು ಮರುದಿನ ಬೆಳಗ್ಗೆ 8.30ಕ್ಕೆ ಕಾಣಲಿಲ್ಲ. ಡಿ 30ರ ಬೆಳಗ್ಗೆ ಹುಡುಕಾಟ ನಡೆಸಿದಾಗ ಅರಣ್ಯ ಪ್ರದೇಶದಲ್ಲಿನ ಮಾವಿನ ಮರಕ್ಕೆ ನೇತಾಡುತ್ತಿದ್ದರು. ಅಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಅವರು ಸಾವನಪ್ಪಿದ್ದರು.