ಹೊನ್ನಾವರ: ಇಕೋ ಬೀಚಿನಲ್ಲಿ ಕೆಲಸ ಮಾಡುವ ಜೀವ ರಕ್ಷಕ ಸಿಬ್ಬಂದಿ ಮೇಲೆ ಅಧಿಕಾರಿಗಳು ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. `ನಮಗೆ ರಕ್ಷಣೆ ಕೊಡಿ’ ಎಂದು ಲೈಫ್ ಗಾರ್ಡ ಸಿಬ್ಬಂದಿ ಜಿಲ್ಲಾಧಿಕಾರಿ ಲಕ್ಷ್ಮೀಪಿಯಾ ಅವರ ಬಳಿ ಅವಲತ್ತುಕೊಂಡಿದ್ದಾರೆ.
`ಭಾನುವಾರ ಜೀವ ರಕ್ಷಕ ಸಿಬ್ಬಂದಿ ಮೇಲೆ ಹಲ್ಲೆ ನಡೆದಿದೆ. ಹಲ್ಲೆಗೊಳಗಾದವರಿಗೆ ನ್ಯಾಯ ಸಿಗಬೇಕು’ ಎಂದು ಅವರು ಸೋಮವಾರ ಜಿಲ್ಲಾಧಿಕಾರಿಗಳ ಬಳಿ ಹೇಳಿದರು. `2016ರಿಂದ ಜೀವ ರಕ್ಷಕ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದು, ಪ್ರವಾಸಿಗರ ರಕ್ಷಣೆಗಾಗಿ ಶ್ರಮಿಸುತ್ತಿದ್ದವರಿಗೆ ಬೆಲೆ ಇಲ್ಲವಾಗಿದೆ. ಈವರೆಗೆ 250ಕ್ಕೂ ಅಧಿಕ ಜನರ ಪ್ರಾಣ ಕಾಪಾಡಿದರೂ ಜೀವ ರಕ್ಷಕರ ಅಳಲು ಆಲಿಸಿದವರಿಲ್ಲ. ಇದೀಗ ಪ್ರವಾಸೋದ್ಯಮ ಇಲಾಖೆ ಅಧಿಕಾರಿಯೊಬ್ಬರು ನಮ್ಮ ಮೇಲೆ ಕೈ ಮಾಡಿದ್ದಾರೆ’ ಎಂದು ದೂರಿದರು.
`ಜೀವ ರಕ್ಷಕ ಸಿಬ್ಬಂದಿಗೆ ಆದ ಅನ್ಯಾಯದ ಬಗ್ಗೆ ಅಧಿಕಾರಿಗಳಿಂದ ವರದಿ ಪಡೆಯಲಾಗುವುದು. ಸತ್ಯಾಸತ್ಯತೆ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವೆ’ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಭರವಸೆ ನೀಡಿದರು.