ಶಿರಸಿ: ಬಿಸಿ ನೀರಿಗೆ ಬೆಂಕಿ ಒಡ್ಡುವ ಅಬ್ಬಿ ಒಲೆ ಬೂದಿಯಲ್ಲಿ ಬೆಚ್ಚಗೆ ಮಲಗಿದ್ದ ಕಾಳಿಂಗ ಸರ್ಪವನ್ನು ಅರಣ್ಯ ಸಿಬ್ಬಂದಿ ಕಾಡಿಗೆ ಬಿಟ್ಟಿದ್ದಾರೆ.
ಶಿರಸಿ ಮತ್ತಿಘಟ್ಟಾದ ಅಣ್ಣಪ್ಪ ಗೌಡರ ಮನೆಗೆ ಕಾಳಿಂಗ ಸರ್ಪ ಆಗಮಿಸಿತ್ತು. ಮೊದಲ ದಿನ ಅಡಿಕೆ ಒಣಗಿಸಿದ ಜಾಗದಲ್ಲಿ ಕಾಣಿಸಿಕೊಂಡಿದ್ದ ಈ ಉರಗ ಮರುದಿನ ನೀರು ಕಾಯಿಸುವ ಒಲೆ ಒಳಗೆ ಅಡಗಿ ಕುಳಿತಿತ್ತು. ಎಂದಿನAತೆ ಬೆಂಕಿ ಹಾಕಲು ತೆರಳಿದ ಅಣ್ಣಪ್ಪ ಹಾವಿನ ಬಾಲ ನೋಡಿ ಕಂಗಾಲಾದರು. ಒಲೆಯೊಳಗೆ ಕಟ್ಟಿಗೆ ತೂರಿದಾಗ ಹಾವು ಬುಸುಗುಡವ ಶಬ್ದ ಕೇಳಿ ಹೌಹಾರಿದರು. ತಕ್ಷಣ ಅವರು ಅರಣ್ಯ ಸಿಬ್ಬಂದಿಗೆ ಅವರು ಫೋನ್ ಮಾಡಿದರು.
ಜಾನ್ಮನೆಯ ಅರಣ್ಯ ಸಿಬ್ಬಂದಿ ಉರಗ ತಜ್ಞ ಮಾಝ್ ಸಯ್ಯದ್ ಅವರನ್ನು ಕರೆ ತಂದರು. ಕೋಟು-ಬೂಟು ಹಾಕಿಕೊಂಡಿದ್ದ ಉರಗ ತಜ್ಞರು ಬೂದಿಯೊಳಗೆ ಅಡಗಿದ್ದ ಹಾವಿನ ಬಾಲ ಹಿಡಿದು ನಿಧಾನವಾಗಿ ಎಳೆದರು. ಸಾಕಷ್ಟು ಓಡಾಟ ನಡೆಸಿದ ನಂತರ ಅದನ್ನು ಚೀಲದೊಳಗೆ ಬಂಧಿಸಿದರು. ನಂತರ ಅರಣ್ಯ ಸಿಬ್ಬಂದಿ ಆ ಹಾವನ್ನು ಕಾಡಿಗೆ ಬಿಟ್ಟು ಬಂದರು.
ಈ ಕಾರ್ಯಾಚರಣೆಯ ವಿಡಿಯೋ ಇಲ್ಲಿ ನೋಡಿ..