ಅಂಕೋಲಾ: ತದಡಿಯಿಂದ ಕಾರವಾರಕ್ಕೆ ತೆರಳುತ್ತಿದ್ದ ಬ್ರೀಜಾ ಕಾರಿಗೆ ಎದುರಿನಿಂದ ಬಂದ ಹುಂಡೈ ಕಾರು ಡಿಕ್ಕಿಯಾಗಿದೆ. ಪರಿಣಾಮ ಎರಡು ಕಾರು ಜಖಂ ಆಗಿದೆ.
ತದಡಿಯ ಬಾಲಕೃಷ್ಣ ನಾಯ್ಕ ಅವರು ಡಿ 29ರ ಸಂಜೆ ತಮ್ಮ ಬ್ರೀಜಾ ಕಾರಿನಲ್ಲಿ ಕಾರವಾರಕ್ಕೆ ಹೋಗುತ್ತಿದ್ದರು. ಬೆಳಸೆ ಬಳಿ ಎದುರಿನಿಂದ ವೇಗವಾಗಿ ಬಂದ ಹುಂಡೈ ಕಾರು ಅವರ ಕಾರಿಗೆ ಡಿಕ್ಕಿಯಾಯಿತು.
ಡಿಕ್ಕಿಯ ರಭಸಕ್ಕೆ ಬಾಲಕೃಷ್ಣ ನಾಯ್ಕ ಅವರ ಬ್ರೀಜಾ ಕಾರಿಗೆ ಹೆಚ್ಚಿನ ಹಾನಿಯಾಗಿದೆ. ಹುಂಡೈ ಕಾರು ಸಹ ಜಖಂ ಆಗಿದೆ. ಹುಂಡೈ ಕಾರು ಚಾಲಕನ ದುಡುಕುತನದ ಬಗ್ಗೆ ಬಾಲಕೃಷ್ಣ ನಾಯ್ಕ ಅವರ ಬಾವ, ಶಿರಸಿ ಗಾಂಧೀನಗರದ ವಕೀಲ ರಾಜೇಶ ನಾಯ್ಕ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.