ಕಾರವಾರ: ಗೋವಾ – ಕಾರವಾರ ಗಡಿಯಲ್ಲಿ ಕಾಡು ಹಂದಿಗೆ ಬೈಕ್ ಡಿಕ್ಕಿಯಾಗಿ ಗಾಯಗೊಂಡಿದ್ದ ವಿಜಯ ಅಂಬಿಗ ಅವರನ್ನು ಚಿಕಿತ್ಸೆಗಾಗಿ ಗೋವಾದ ಬಾಂಬೋಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೇ ಅವರು ಸಾವನಪ್ಪಿದ್ದಾರೆ.
ಕೋಡಿಭಾಗ ಸರ್ವೋದಯ ನಗರದ ವಿಜಯ ಅಂಬಿಗ ಹೊಟೇಲ್’ವೊಂದರಲ್ಲಿ ಕೆಲಸಕ್ಕಿದ್ದರು. ಅವರು ಡಿ 27ರ ರಾತ್ರಿ ರ‍್ಲೆಭಾಗದ ಜನಾರ್ಧನ ಠಾಕೇಕರ್ ಅವರ ಜೊತೆಗೆ ಗೋವಾಗೆ ಹೋಗಿದ್ದರು. ಮರಳಿ ಕಾರವಾರ ಕಡೆ ಬರುವಾಗ ಘೋಟ್ನೇಭಾಗದ ಬಳಿ ಅವರ ಬೈಕಿಗೆ ಕಾಡು ಹಂದಿ ಡಿಕ್ಕಿಯಾಗಿತ್ತು.
ಬೈಕಿಗೆ ಹಂದಿ ಗುದ್ದಿದ ಪರಿಣಾಮ ಜನಾರ್ಧನ ಅವರಿಗೆ ಬೈಕ್ ಮೇಲಿನ ನಿಯಂತ್ರಣ ತಪ್ಪಿತು. ಬೈಕಿನ ಜೊತೆ ಜನಾರ್ಧನ ಹಾಗೂ ಅವರ ಜೊತೆಗಿದ್ದ ವಿಜಯ ಅಂಬಿಗ ಸಹ ನೆಲಕ್ಕೆ ಬಿದ್ದು ಪೆಟ್ಟು ಮಾಡಿಕೊಂಡಿದ್ದರು. ವಿನೋದ ಅಂಬಿಗ ಅವರ ತಲೆಗೆ ಗಂಭೀರ ಪ್ರಮಾಣದಲ್ಲಿ ಗಾಯವಾಗಿದ್ದರಿಂದ ಅವರನ್ನು ಬಾಂಬೋಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ, ಎಷ್ಟು ಪ್ರಯತ್ನಿಸಿದರೂ ಅವರು ಬದುಕಲಿಲ್ಲ. ಮೂರು ದಿನದ ನರಳಾಟದ ನಂತರ ಡಿ 30ಕ್ಕೆ ಅವರು ಸಾವನಪ್ಪಿದರು.