ಅಂಕೋಲಾ: ಹಳವಳ್ಳಿಯಿಂದ ಗುಳ್ಳಾಪುರ ಕಡೆಗೆ ಬರುತ್ತಿದ್ದ ಬೈಕಿಗೆ ದನ ಅಡ್ಡ ಬಂದಿದ್ದು, ಬೈಕಿನಿಂದ ಬಿದ್ದ ಮಹಿಳೆ ಸಾವನಪ್ಪಿದ್ದಾರೆ. ರಾಮನಗುಳಿ ಸುಪರ್ ಮಾರ್ಕೇಟ್ ಬಳಿಯ ಸಿಮೆಂಟ್ ರಸ್ತೆ ಮೇಲೆ ಈ ಅಪಘಾತ ನಡೆದಿದೆ.
ಡಿ 30ರ ಸಂಜೆ ಹಳವಳ್ಳಿ ಆದ್ರಳ್ಳಿಯ ಕೃಷ್ಣ ಸಿದ್ದಿ ತಮ್ಮ ಪತ್ನಿ ಸಂಗೀತಾ ಸಿದ್ದಿ ಅವರ ಜೊತೆ ಬೈಕಿನಲ್ಲಿ ಬರುತ್ತಿದ್ದರು. ರಾಮನಗುಳಿ ಸೊಸೈಟಿ ಬಳಿ ಅವರ ಬೈಕಿಗೆ ದನ ಅಡ್ಡ ಬಂದಿದ್ದು, ಬೈಕನ್ನು ನಿಲ್ಲಿಸಲಾಗದೇ ಅವರು ನೆಲಕ್ಕೆ ಬಿದ್ದರು. ಬೈಕಿನಲ್ಲಿ ಹಿಂದೆ ಕೂತಿದ್ದ ಸಂಗೀತಾ ಸಿದ್ದಿ ಅವರು ನೆಲಕ್ಕೆ ಅಪ್ಪಳಿಸಿ ತಲೆಗೆ ಗಂಭೀರ ಪ್ರಮಾಣದಲ್ಲಿ ಪೆಟ್ಟು ಮಾಡಿಕೊಂಡರು.
ಅಪಘಾತ ನೋಡಿದ ಜನ 108ಗೆ ಫೋನ್ ಮಾಡಿದರು. ಸಂಗೀತ ಸಿದ್ದಿ ಅವರನ್ನು ಅಂಕೋಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅವರು ಚಿಕಿತ್ಸೆಗೆ ಸ್ಪಂದಿಸಲಿಲ್ಲ. ರಾತ್ರಿ 8.30ರ ಆಸುಪಾಸಿಗೆ ಅವರು ಸಾವನಪ್ಪಿದ ಬಗ್ಗೆ ವೈದ್ಯರು ಘೋಷಿಸಿದರು.
ಹೆಬ್ಬಾರಗುಡ್ಡದ ದಯಾನಂದ ಸಿದ್ದಿ ಈ ಬಗ್ಗೆ ಪೊಲೀಸರಿಗೆ ವರದಿ ಒಪ್ಪಿಸಿ, ಪ್ರಕರಣ ದಾಖಲಿಸಿದರು.