ಕುಮಟಾ: ರಸ್ತೆ ಮೇಲೆ ಗಾಡಿ ನಿಲ್ಲಿಸಿದ ವಿಷಯವಾಗಿ ಶುರುವಾದ ಜಗಳ ಹೊಡಪೆಟ್ಟಿನ ರೂಪ ಪಡೆದು ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಮೂವರಿಂದ ಪೆಟ್ಟು ತಿಂದು ಆಸ್ಪತ್ರೆ ಸೇರಿರುವ ಶಿವಲಿಂಗ ಮೊರ್ಜೆ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ.
ದುಬ್ಬಿನಸಶಿಯ ಮೀನುಗಾರ ಶಿವಲಿಂಗ ಮೊರ್ಜೆ ಅವರು ಜನವರಿ 1ರ ನಸುಕಿನ 1.15ಕ್ಕೆ ತಮ್ಮ ಸ್ನೇಹಿತ ಅದ್ವಿತ್ ಮೋಹನ ಅವರ ಜೊತೆ ಸಮುದ್ರಕ್ಕೆ ಹೋಗಿದ್ದರು. ಅಲ್ಲಿಂದ ಮರಳುವಾಗ ಐಸಿರಿ ಕಂಪರ್ಟ ರೆಸಾರ್ಟಿನ ಎದುರು ಅದೇ ಊರಿನ ರಾಘವೇಂದ್ರ ಪೆಡ್ನೇಕರ್ ಎದುರಾದರು. ಅವರ ಜೊತೆಯಿದ್ದ ಮಂಜುನಾಥ ಗುನಗಾ ಹಾಗೂ ರಾಹುಲ್ ಪೆಡ್ನೇಕರ್ ಸೇರಿ ಶಿವಲಿಂಗ ಮೊಚೆ ಅವರನ್ನು ಅಡ್ಡಗಡ್ಡಿದರು.
`ನಾವು ರಸ್ತೆಯಲ್ಲಿ ಗಾಡಿ ನಿಲ್ಲಿಸಿದಕ್ಕೆ ತಿರುಗಾಟಕ್ಕೆ ತೊಂದರೆಯಾಗಿದೆ ಎಂದು ಎಲ್ಲಾ ಕಡೆ ಹೇಳಿದ್ದೀಯಾ?’ ಎಂದು ಆ ಮೂವರು ಶಿವಲಿಂಗ ಮೊಚೆ ಅವರನ್ನು ಪ್ರಶ್ನಿಸಿದರು. `ನಾನೇನೂ ಹೇಳಿಲ್ಲ.. ನಂಗೇನೂ ಗೊತ್ತಿಲ್ಲ’ ಎಂದು ಶಿವಲಿಂಗ ಮೊರ್ಜೆ ಹೇಳಿದರು. ಅದಾಗಿಯೂ ಅಡ್ಡಗಟ್ಟಿದ ಆ ಮೂವರು `ನಾವು ರಸ್ತೆಯಲ್ಲಿ ಗಾಡಿ ನಿಲ್ಲಿಸುವ ಬಗ್ಗೆ ಎಲ್ಲಾದರೂ ಮಾತನಾಡಿದರೆ ಒಂದು ಗತಿ ಕಾಣಿಸುವೆ’ ಎಂದು ದೂಡಾಡಿದರು.
ಆ ಮೂವರು ಸೇರಿ ಶಿವಲಿಂಗ ಮೊರ್ಚೆ ಅವರ ಸ್ಕೂಟಿಯನ್ನು ನೆಲಕ್ಕೆ ಬೀಳಿಸಿ ಜಖಂ ಮಾಡಿದರು. ಈ ವೇಳೆ ಶಿವಲಿಂಗ ಮೊರ್ಜೆ ಅವರ ಮೇಲೆ ರಾಘವೇಂದ್ರ ಪೆಡ್ನೇಕರ್ ಕೈ ಮಾಡಿದ್ದು, ಆ ನೋವಿಗೆ ಶಿವಲಿಂಗ ಮೊರ್ಜೆ ಆಸ್ಪತ್ರೆ ಸೇರಿದರು. ಇದರಿಂದ ನೊಂದ ಶಿವಲಿಂಗ ಮೊರ್ಜೆ ನ್ಯಾಯಕ್ಕಾಗಿ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.