ಸಿದ್ದಾಪುರ: ಗದ್ದೆಗೆ ಹಾಕಲು ತಂದಿರಿಸಿದ ತಿಮೆಟ್ ಸೇವಿಸಿ ತಿಮ್ಮಾ ಗೊಂಡ ಸಾವನಪ್ಪಿದ್ದಾರೆ.
ಸಿದ್ದಾಪುರದ ಪಡವನಬೈಲ್ ಅಕ್ಕುಂಜಿಯ ತಿಮ್ಮಾ ಗೊಂಡ (48) ಸರಾಯಿ ಕುಡಿಯುವ ಚಟ ಹೊಂದಿದ್ದರು. ಡಿ 28ರಂದು ಅವರು ಮನೆಯಲ್ಲಿದ್ದ ತಿಮೆಂಟ್ ತಿಂದು ಅಸ್ವಸ್ಥರಾಗಿದ್ದರು. ಇದನ್ನು ನೋಡಿದ ಅವರ ತಂದೆ ರಾಮಾ ಗೊಂಡ (70) ಮಗನನ್ನು ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು.
ಅಲ್ಲಿನ ವೈದ್ಯರ ಶಿಫಾರಸ್ಸಿನ ಮೇರೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ದರು. ಮೂರು ದಿನಗಳ ನರಳಾಟ ನಡೆಸಿದ ತಿಮ್ಮಾ ಗೊಂಡ ಡಿ 31ರ ರಾತ್ರಿ ಸಾವನಪ್ಪಿದರು. ರಾಮಾ ಗೊಂಡ ಅವರ ಪೊಲೀಸ್ ಪ್ರಕರಣ ದಾಖಲಿಸಿ ಶವ ಪಡೆದರು.



