ಮುಂಡಗೋಡ: ಮೂತ್ರ ವಿಸರ್ಜನೆಗೆ ತೆರಳಿದ ವೇಳೆ ಹಾವು ಕಚ್ಚಿ ಸಾವನಪ್ಪಿದ 4 ವರ್ಷದ ಮಯೂರಿ ಅವರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಬಿಜೆಪಿಗರು ಆಗ್ರಹಿಸಿದ್ದಾರೆ. ಈ ಕುರಿತು ಸರ್ಕಾರಕ್ಕೆ ಅವರು ಪತ್ರ ರವಾನಿಸಿದ್ದಾರೆ. ಸ್ಥಳೀಯವಾಗಿ ಚಿಕಿತ್ಸೆ ನೀಡದೇ ಹುಬ್ಬಳ್ಳಿಗೆ ಕಳುಹಿಸಿದ ವೈದ್ಯ ಸಿಬ್ಬಂದಿ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
`ಅಂಗನವಾಡಿ ಮಕ್ಕಳಿಗೆ ಸೂಕ್ತ ಭದ್ರತೆ ಇಲ್ಲದಿರುವುದೇ ಈ ಸಾವಿಗೆ ಕಾರಣ’ ಎಂದು ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಎಲ್ ಟಿ ಪಾಟೀಲ್ ದೂರಿದ್ದಾರೆ. `ಬೇಜವಬ್ದಾರಿ ತೋರಿದ ಅಧಿಕಾರಿಗಳಿಗೆ ಶಿಕ್ಷೆಯಾಗಬೇಕು. ಭವಿಷ್ಯದಲ್ಲಿ ಇಂಥ ಘಟನೆ ಮರುಕಳಿಸದಂತೆ ಕ್ರಮ ಜರುಗಿಸಬೇಕು’ ಎಂದವರು ಆಗ್ರಹಿಸಿದ್ದಾರೆ.
`ಸಾವನಪ್ಪಿದವರ ಕುಟುಂಬಕ್ಕೆ 20 ಲಕ್ಷ ಪರಿಹಾರ ನೀಡಬೇಕು. ಇದನ್ನು ವಿಶೇಷ ಪ್ರಕರಣ ಎಂದು ಮುಖ್ಯಮಂತ್ರಿಗಳು ಪರಿಗಣಿಸಬೇಕು’ ಎಂದು ಆಗ್ರಹಿಸಿ ಬಿಜೆಪಿ ಪ್ರಮುಖರಾದ ಮಂಜುನಾಥ್ ಪಾಟೀಲ್, ತುಕರಾಮ ಇಂಗಳೆ, ಭರತರಾಜ ಹದಳಗಿ, ಬಸವರಾಜ ಟಣಕೆದಾರ, ವಿಠ್ಠಲ ಬಾಳಂಬೀಡ, ಗುರು ಕಾಮತ್ ಇನ್ನಿತರರು ಸರ್ಕಾರಕ್ಕೆ ಪತ್ರ ರವಾನಿಸಿದರು.



