ಕಾರವಾರ: ಕೈಗಾ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ರಿಕ್ಷಾಗೆ ಕಾರು ಡಿಕ್ಕಿಯಾಗಿದೆ. ಪರಿಣಾಮ ರಿಕ್ಷಾದಲ್ಲಿದ್ದ ನಾಲ್ವರು ಗಾಯಗೊಂಡಿದ್ದಾರೆ.
ರಿಕ್ಷಾ ಚಾಲಕ ಸಯ್ಯದ ಬಳೆಗಾರ್ ಅವರು ಡಿ 30ರಂದು ಅಸ್ಮಿದ್ ಬಳೆಗಾರ (26), ಸಾಧಿಕ್ ಬಳೆಗಾರ (2) ಹಾಗೂ ಹುಸೇನಾಬಿ ಮುಖಂದರ್ (55) ಎಂಬಾತರನ್ನು ಕರೆದೊಯ್ಯುತ್ತಿದ್ದರು. ಶಿರವಾಡ ಕಡೆ ಹೋಗುತ್ತಿದ್ದ ರಿಕ್ಷಾಗೆ ಕದ್ರಾ ಕಡೆಯಿಂದ ಕಾರವಾರದ ಕಡೆ ಚಲಿಸುತ್ತಿದ್ದ ಕಾರು ಡಿಕ್ಕಿಯಾಯಿತು.
ಶೇಜವಾಡ ಕೆರೆ ಬಳಿ ಈ ಅಪಘಾತ ನಡೆದಿದ್ದು, ಕಾರಿನ ಚಾಲಕ ತನ್ನ ವಾಹನ ನಿಲ್ಲಿಸಲಿಲ್ಲ. ಅಪಘಾತದ ರಭಸಕ್ಕೆ ರಿಕ್ಷಾ ಒಳಗಿದ್ದ ಚಾಲಕ ಸೇರಿ ನಾಲ್ವರು ಗಾಯಗೊಂಡರು. ಅಪಘಾತ ಆಗಿರುವ ಬಗ್ಗೆ ಅರಿವಿದ್ದರೂ ಕಾರು ಚಾಲಕ ನಿಲ್ಲಿಸದೇ ಪರಾರಿಯಾದ ಕಾರಣ ಆತನ ವಿರುದ್ಧ ಅಸ್ಮಿದ್ ಬಳೆಗಾರ ಪೊಲೀಸ್ ದೂರು ನೀಡಿದರು.