ಶಿರಸಿ: ರಾಯರಪೇಟೆ ಮಾರುತಿ ದೇವಸ್ಥಾನದ ಎದುರು ನಡೆದು ಹೋಗುತ್ತಿದ್ದ ರಾಜೇಶ ನಾಯ್ಕ ಅವರಿಗೆ ಸ್ಕೂಟಿ ಗುದ್ದಿದೆ. ಪರಿಣಾಮ ಅವರ ಮೊಣಕಾಲು ಮುರಿದಿದೆ.
ಶಿರಸಿ ಅರಸಿಕೆರೆಯ ರಾಜೇಶ ನಾಯ್ಕ ಅವರು ಡಿ 31ರಂದು ರಾಯರಪೇಟೆ ಕ್ರಾಸಿನಿಂದ ಶಿವಾಜಿ ಚೌಕದ ಕಡೆ ನಡೆದು ಹೋಗುತ್ತಿದ್ದರು. ಆಗ, ಜೋರಾಗಿ ಸ್ಕೂಟಿ ಓಡಿಸಿಕೊಂಡು ಬಂದ ಕುಮಟಾ ಹಳದಿಪುರದ ನಾಗರಾಜ ಮುಕ್ರಿ ಅವರಿಗೆ ಡಿಕ್ಕಿ ಹೊಡೆದರು.
ಅಪಘಾತದ ರಭಸಕ್ಕೆ ರಾಜೇಶ ನಾಯ್ಕ ಅವರು ನೆಲಕ್ಕೆ ಬಿದ್ದು ಪೆಟ್ಟು ಮಾಡಿಕೊಂಡರು. ಸ್ಕೂಟಿ ಗುದ್ದಿದ್ದರಿಂದ ಅವರ ಬಲ ಕಾಲಿನ ಮೂಳೆ ಮುರಿದಿದ್ದು, ಶಿರಸಿ ಪಂಡಿತ್ ಆಸ್ಪತ್ರೆಗೆ ಅವರು ದಾಖಲಾಗಿದ್ದಾರೆ. ಈ ಅಪಘಾತಕ್ಕೆ ಕಾರಣರಾದ ನಾಗರಾಜ ಮುಕ್ರಿ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ.