ಹೊನ್ನಾವರ: ಕೂಲಿ ಕೆಲಸ ಮಾಡಿ ಬದುಕು ಕಂಡುಕೊoಡಿದ್ದ ಮಿಲ್ಟನ್ ಡಿಸೋಜಾ ವಿಪರೀತ ಸರಾಯಿ ಸೇವನೆಯಿಂದ ತಮ್ಮ 27ನೇ ವಯಸ್ಸಿನಲ್ಲಿ ಸಾವನಪ್ಪಿದ್ದಾರೆ. ಕೂಲಿ ಕೆಲಸ ಮುಗಿಸಿ ಬಂದ ಅವರು ಮಲಗಿದಲ್ಲಿಯೇ ರಕ್ತದ ವಾಂತಿ ಮಾಡಿಕೊಂಡು ಕೊನೆ ಉಸಿರೆಳೆದಿದ್ದಾರೆ.
ಹೊನ್ನಾವರದ ಕೊಡಾಣಿ ಚರ್ಚಕೇರಿಯಲ್ಲಿ ಮಿಲ್ಟನ್ ಡಿಸೋಜಾ ವಾಸವಾಗಿದ್ದರು. 20ನೇ ವಯಸ್ಸಿನಲ್ಲಿಯೇ ಅವರು ಸರಾಯಿ ಚಟಕ್ಕೆ ಅಂಟಿಕೊAಡಿದ್ದರು. ಕಳೆದ ಏಳು ವರ್ಷಗಳಿಂದ ಅವರು ನಿತ್ಯವೂ ಮದ್ಯ ಸೇವಿಸುತ್ತಿದ್ದರು. ಜನವರಿ 1ರಂದು ಕೂಲಿ ಕೆಲಸಕ್ಕೆ ಹೋಗಿದ್ದ ಅವರು ಬೆಳಗ್ಗೆ 11 ಗಂಟೆ ಅವಧಿಗೆ ಮನೆಗೆ ಮರಳಿದ್ದರು. ಆಯಾಸ ಎಂದು ಮನೆಯಲ್ಲಿ ಮಲಗಿದ್ದ ಮಿಲ್ಟನ್ ಡಿಸೋಜಾ ಸಂಜೆ 4 ಗಂಟೆ ಆದರೂ ಎದ್ದಿರಲಿಲ್ಲ.
ಮಗನಿಗೆ ಊಟ ಕೊಡುವುದಕ್ಕಾಗಿ ಅವರ ತಾಯಿ ಪ್ರೇಮಾ ಎಬ್ಬಿಸುವ ಪ್ರಯತ್ನ ಮಾಡಿದರು. ಆ ವೇಳೆ ವಿಲ್ಟನ್ ಅವರ ಮೂಗು ಹಾಗೂ ಬಾಯಿಯಿಂದ ರಕ್ತ ಬರುತ್ತಿರುವುದು ಗಮನಕ್ಕೆ ಬಂದಿತು. ಗಾಬರಿಗೊಂಡ ಪ್ರೇಮಾ ಅವರು ಪತಿ ಅರವಿಂದ ಡಿಸೋಜಾ ಅವರಿಗೆ ಫೋನ್ ಮಾಡಿದರು.
ಅರವಿಂದ ಡಿಸೋಜಾ ಮನೆಗೆ ಬಂದಾಗ ವಿಲ್ಟನ್ ಡಿಸೋಜಾ ಕೋಣೆಯಲ್ಲಿ ಅಂಗಾತವಾಗಿ ಬಿದ್ದಿದ್ದರು. ಆ ವೇಳೆಗಾಗಲೇ ಅಕ್ಕ ಪಕ್ಕದ ಮನೆಯವರು ಬಂದು ವಿಕ್ಟನ್’ನನ್ನು ಉಪಚರಿಸುವ ಪ್ರಯತ್ನ ನಡೆಸಿದ್ದರು. ಮೂಗಿನ ಬಳಿ ಬೆರಳು ಹಿಡಿದು ನೋಡಿದಾಗ ವಿಕ್ಟನ್ ಉಸಿರಾಟ ನಡೆಸುತ್ತಿರಲಿಲ್ಲ.
ವಿಕ್ಟನ್ ವಿಪರೀತ ಸರಾಯಿ ಕುಡಿದು ಅನಾರೋಗ್ಯಕ್ಕೆ ಒಳಗಾಗಿ ಸಾವನಪ್ಪಿದ್ದು ಕುಟುಂಬದವರಿಗೂ ಖಚಿತವಾಯಿತು. ಈ ಬಗ್ಗೆ ಅರವಿಂದ ಅವರು ಪೊಲೀಸರಿಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದರು.
ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ