ಅಂಕೋಲಾ: ಶಿರಸಿಯಿಂದ ಅಂಕೋಲಾಗೆ ಬರುತ್ತಿದ್ದ ಟೆಂಪೋ ಮರಕ್ಕೆ ಡಿಕ್ಕಿಯಾಗಿದೆ. ಪರಿಣಾಮ ಟೆಂಪೋದಲ್ಲಿದ್ದ 24 ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಗೊಂಡ ಎಲ್ಲರೂ 60 ವರ್ಷ ಮೇಲ್ಪಟ್ಟವರಾಗಿದ್ದಾರೆ.
ಜನವರಿ 1ರ ಸಂಜೆ ಶಿರೂರು ಹಾಗೂ ಬೆಳಸೆಯ ಕೆಲವರು ಶಿರಸಿಯಿಂದ ಅಂಕೋಲಾಗೆ ಟೆಂಪೋದಲ್ಲಿ ಬರುತ್ತಿದ್ದರು. ವಡ್ಡಿಘಾಟ್ ಮೂಲಕ ಟೆಂಪೊ ಸಂಚರಿಸುತ್ತಿದ್ದು, ಅಲ್ಲಿನ ಇಳಿಜಾರಿನಲ್ಲಿ ಟೆಂಪೋ ಮರಕ್ಕೆ ಡಿಕ್ಕಿಯಾಗಿದೆ.
ಇದರಿಂದ ಶಿರೂರಿನ ಕುಸುಮಾ ಗೌಡ, ಇಂದು ಗೌಡ, ಗೌರಿ ಗೌಡ, ನಾಗಿ ಗೌಡ, ಕುಸುಮಾ ಗೌಡ, ದುರ್ಗಿ ಗೌಡ, ಸೋಮಿ ಗೌಡ, ಪಾರ್ವತಿ ಗೌಡ, ಶಿವು ಗೌಡ, ಮೋಹಿನಿ ಗೌಡ, ಸಣ್ಣು ಗೌಡ, ಓಮಿ ಗೌಡ, ಗಿರಿಜಾ ಗೌಡ, ಸೋಮಿ ಗೌಡ ಗಾಯಗೊಂಡಿದ್ದಾರೆ.
ಬೆಳಸೆಯ ಎಲಿಯಮ್ಮ ಗೌಡ, ಪ್ರೇಮಾ ಗೌಡ, ಸಣ್ಣಿ ಗೌಡ, ತುಳಸಿ ಗೌಡ, ಬೀರು ಗೌಡ, ನದಾ ಗೌಡ, ನಾಗಮ್ಮ ಗೌಡ, ಶಾರದಾ ಗೌಡ, ಇಮಿ ಗೌಡ ಸಹ ಗಾಯಗೊಂಡಿದ್ದಾರೆ. ಈ ಅಪಘಾತಕ್ಕೆ ಕಾರಣರಾದ ಹುಲಿದೆವರವಾಡದ ಟೆಂಪೋ ಚಾಲಕ ರಾಘವೇಂದ್ರ ಇಳಿಗೇರ ವಿರುದ್ಧ ಪೂಜಗೇರಿಯ ಕ್ಲೀನರ್ ದಯಾನಂದ ಗಾಂವಕಾರ ಪೊಲೀಸ್ ದೂರು ದಾಖಲಿಸಿದ್ದಾರೆ.