ಕಾರವಾರ: ಉತ್ತರ ಪ್ರದೇಶದಿಂದ ಉತ್ತರ ಕನ್ನಡ ಪ್ರವಾಸಕ್ಕೆ ಬಂದಿದ್ದ ಶಾವೇಶ್ ಅವರ ಬೈಕು ಸುಟ್ಟು ಕರಕಲಾಗಿದೆ. ಅಮದಳ್ಳಿ ಬಳಿ ಚಲಿಸುತ್ತಿದ್ದ ಬೈಕಿಗೆ ಏಕಾಏಕಿ ಬೆಂಕಿ ತಗುಲಿದ್ದು, ಬೈಕಿನಿಂದ ಹಾರಿ ಶಾವೇಶ್ ಜೀವ ಉಳಿಸಿಕೊಂಡಿದ್ದಾರೆ.
ಶಾವೇಶ್ ಅವರು ಮುರ್ಡೇಶ್ವರದಿಂದ ಗೋವಾದ ಕಡೆ ತಮ್ಮ ಜಾವಾ ಬೈಕಿನಲ್ಲಿ ಹೋಗುತ್ತಿದ್ದರು. ಅವರ ಹಿಂದೆ ಹಾಗೂ ಮುಂದೆ ಇನ್ನಿತರ ಸ್ನೇಹಿತರು ಬೈಕಿನಲ್ಲಿದ್ದರು. ಬೈಕಿನಲ್ಲಿ ಹೊಗೆ ಕಾಣಿಸಿಕೊಂಡಿರುವುದನ್ನು ಆವೇಶ್ ಅವರ ಸ್ನೇಹಿತರು ಮಾಹಿತಿ ನೀಡಿದರು. ಬೈಕಿನ ಹಿಂದೆ ಬೆಂಕಿ ಬಂದಿರುವುದನ್ನು ನೋಡಿದ ಶಾವೇಶ್ ಅಲ್ಲಿಂದ ಕೆಳಗೆ ಹಾರಿ ಜೀವ ಉಳಿಸಿಕೊಂಡರು.
ಕ್ಷಣಮಾತ್ರದಲ್ಲಿ ಇಡೀ ಬೈಕ್ ಬೆಂಕಿಗೆ ಆಹುತಿಯಾಯಿತು. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ಆರಿಸುವ ಪ್ರಯತ್ನ ಮಾಡಿದರು. ಆದರೆ, ಅಷ್ಟರೊಳಗೆ ಬೈಕ್ ಕರಕಲಾಗಿತ್ತು. ಬೈಕಿನ ತುಂಬ ಪೆಟ್ರೋಲ್ ಸಹ ಇದ್ದಿದ್ದರಿಂದ ಕ್ಷಣಮಾತ್ರದಲ್ಲಿ ಆ ವಾಹನ ಹೊತ್ತಿ ಉರಿಯಿತು. ಬೈಕಿನ ಹೊಗೆಯಿಂದಾಗಿ ತಾಸುಗಳ ಕಾಲ ಸ್ಥಳದಲ್ಲಿ ಕಪ್ಪು ವಾತಾವರಣ ಕಾಣಿಸಿತು.
ಚಲಿಸುತ್ತಿದ್ದ ಬೈಕು ಬೆಂಕಿಗೆ ಆಹುತಿಯಾದ ವಿಡಿಯೋ ಇಲ್ಲಿ ನೋಡಿ..