ಯಲ್ಲಾಪುರ: ಗುರುಗಜಾನನ ಹಾರ್ಡವೇರ್ ಬಳಿ ನಿಲ್ಲಿಸಿದ್ದ ಬೈಕನ್ನು ಕಳ್ಳರು ಎಗರಿಸಿದ್ದಾರೆ. ಗಣಪತಿ ಹೆಗಡೆ ಅವರ ಬೈಕನ್ನು ಹಗಲು ಹೊತ್ತಿನಲ್ಲಿಯೇ ದುಷ್ಕರ್ಮಿಗಳು ಅಪಹರಿಸಿದ್ದಾರೆ.
ಹೊಸ ತಹಶೀಲ್ದಾರ್ ಕಚೇರಿ ಎದುರುಗಡೆ ಇರುವ ಗುರುಗಜಾನನ ಮಳಿಗೆ ಅಂಚಿನಲ್ಲಿ ಈ ಕಳ್ಳತನ ನಡೆದಿದೆ. ಹುಬ್ಬಳ್ಳಿ – ಅಂಕೋಲಾ ಹೆದ್ದಾರಿ ಬದಿ ನಿಲ್ಲಿಸಿದ ಬೈಕನ್ನು ಕಳ್ಳರು ಕದ್ದಿದ್ದಾರೆ. ಕಾಳಮ್ಮ ನಗರದ ಗಣಪತಿ ಹೆಗಡೆ ಅವರು ಜನವರಿ ೧ರ ಬೆಳಗ್ಗೆ ೧೦ ಗಂಟೆ ಅವಧಿಯಲ್ಲಿ ತಮ್ಮ ಯಮಹಾ ಕ್ರಕ್ಸ್ ಬೈಕನ್ನು ಗುರುಗಜಾನನ ಮಳಿಗೆ ಪಕ್ಕ ನಿಲ್ಲಿಸಿದ್ದರು. ಮಧ್ಯಾಹ್ನ ೨ ಗಂಟೆಗೆ ಅಲ್ಲಿ ಬೈಕ್ ಇರಲಿಲ್ಲ.
ಸಾಕಷ್ಟು ಹುಡುಕಾಟ ನಡೆಸಿದ ಗಣಪತಿ ಹೆಗಡೆ ಅವರು ಕೊನೆಗೆ `ತಮ್ಮ ಬೈಕ್ ಹುಡುಕಿಕೊಡಿ’ ಎಂದು ಪೊಲೀಸರ ಮೊರೆ ಹೋಗಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬೈಕ್ ಕಳ್ಳತನ ಪತ್ತೆಗೆ ಹುಡುಕಾಟ ನಡೆಸಿದ್ದಾರೆ.