ಯಲ್ಲಾಪುರ: ಹೊಸ ವರ್ಷದ ಮೊದಲ ದಿನ ಕಿರವತ್ತಿಯಲ್ಲಿ ಸರಣಿ ಕಳ್ಳತನ ನಡೆದಿದೆ. ಬಾರ್, ಸೊಸೈಟಿ, ಬಟ್ಟೆ ಅಂಗಡಿಗಳ ಮೇಲೆ ಜನವರಿ 1ರ ರಾತ್ರಿ ಕಳ್ಳರು ದಾಳಿ ನಡೆಸಿದ್ದಾರೆ.
ಕಿರವತ್ತಿಯ ಪ್ರಗತಿ ದನಗರ ಗೌಳಿ ಸಹಕಾರಿ ಸಂಘದ ಕಚೇರಿಯ ಶಟರ್ಸ ಮುರಿದ ಕಳ್ಳರು ಒಳಗೆ ಪ್ರವೇಶಿಸಿ ಡ್ರಾವರಿನಲ್ಲಿದ್ದ ಕೀ ಎಗರಿಸಿದ್ದಾರೆ. ಅದಾದ ನಂತರ ಟ್ರಜರಿ ತೆಗೆದು ಅಲ್ಲಿದ್ದ ಹಣವನ್ನು ಅಪಹರಿಸಿದ್ದಾರೆ. ಕ್ಯಾಶ್ ಬ್ಯಾಗ್ ಜೊತೆ ಅದರೊಳಗಿದ್ದ 51240ರೂ ಹಣ ಕಣ್ಮರೆಯಾಗಿದೆ.
ಪಕ್ಕದಲ್ಲಿರುವ ಇನ್ನೊಂದು ಸೊಸೈಟಿಯ ಬೀಗ ಒಡೆಯಲು ಸಹ ಕಳ್ಳರು ಪ್ರಯತ್ನಿಸಿದ್ದು, ಅದು ಸಾಧ್ಯವಾಗಿಲ್ಲ. ಇದರೊಂದಿಗೆ ಆ ಪ್ರದೇಶದಲ್ಲಿದ್ದ ಬಟ್ಟೆ ಅಂಗಡಿ ಹಾಗೂ ಬಾರ್ ಒಳಗೆ ನುಗ್ಗಿ ಅಲ್ಲಿಯೂ ತಮ್ಮ ಕೈ ಚಳಕ ಪ್ರದರ್ಶಿಸಿದ್ದಾರೆ. ಗುರುವಾರ ಬೆಳಗ್ಗೆ ಸೊಸೈಟಿ ಬಾಗಿಲು ತೆರೆಯಲು ಆಗಮಿಸಿದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ.
ಕಿರವತ್ತಿಯ ಪ್ರಗತಿ ದನಗರ ಗೌಳಿ ಸಹಕಾರಿ ಸಂಘದಲ್ಲಿ ನಡೆದ ಕಳ್ಳತನಕ್ಕೆ ಸಂಬAಧಿಸಿ ಸೊಸೈಟಿ ಮ್ಯಾನೇಜರ್ ಪಾಂಡು ಪಟಗಾರೆ ಪೊಲೀಸ್ ದೂರು ನೀಡಿದ್ದಾರೆ. ಕಳ್ಳರ ಹುಡುಕಾಟಕ್ಕಾಗಿ ಬಲೆ ಬೀಸಿರುವ ಪೊಲೀಸರು ಸಿಸಿ ಕ್ಯಾಮರಾ ದಾಖಲೆಗಳನ್ನು ಪರಿಶೀಲಿಸಿದ್ದಾರೆ.