ಅಂಕೋಲಾ: ಶಿರಕುಳಿಯಲ್ಲಿನ ಮನೆಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿದೆ. ಮನೆಯಲ್ಲಿದ್ದ ಸಾಮಗ್ರಿಗಳೆಲ್ಲವೂ ಸುಟ್ಟು ಕರಕಲಾಗಿದೆ.
ಶಿರಕುಳಿಯ ಮಾರಿಕಾಂಬಾ ದೇವಸ್ಥಾನಕ್ಕೆ ಹೊಂದಿಕೊAಡಿರುವ ಸಾಯಿನಾಥ ವೈಕುಂಠ ನಾಯ್ಕ ಅವರ ಮನೆಗೆ ಮಂಗಳವಾರ ರಾತ್ರಿ ಬೆಂಕಿ ತಗುಲಿದೆ. ಮನೆ ಹಿಂದೆ ಹೊತ್ತಿಕೊಂಡ ಬೆಂಕಿ ಕ್ಷಣಮಾತ್ರದಲ್ಲಿ ಪೂರ್ತಿ ಮನೆಗೆ ಆವರಿಸಿದೆ.
ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದರೂ ಇಕ್ಕಟ್ಟಾದ ಸ್ಥಳಕ್ಕೆ ತೆರಳಲು ಸಾಧ್ಯವಾಗಲಿಲ್ಲ. ಅದಾಗಿಯೂ ನೀರು ಹಾರಿಸಿ ಬೆಂಕಿ ಆರಿಸಿದರು. ಆದರೆ, ಮನೆ ಸಾಮಗ್ರಿಗಳೆಲ್ಲವೂ ಭಸ್ಮವಾಗಿದ್ದವು.
ಮಾರಿಕಾಂಬಾ ದೇವಸ್ಥಾನಕ್ಕೆ ಸೇರಿದ ವಾದ್ಯ ಪರಿಕರ, ಪಾತ್ರೆ-ಪಗಡೆ, ಸೀರೆ-ಬಟ್ಟೆ ಸೇರಿ ಹಲವು ಸಾಮಗ್ರಿಗಳು ಈ ಮನೆಯಲ್ಲಿದ್ದವು. ಅವೆಲ್ಲವೂ ಹಾನಿಗೊಳಗಾಗಿವೆ. ಬೆಂಕಿಯ ರಭಸಕ್ಕೆ ಅಕ್ಕಪ್ಕದ ಮನೆಗೂ ಹಾನಿಯಾಗಿದೆ.