ದಾಂಡೇಲಿ: ಹೊಸ ವರ್ಷದ ಸಂಭ್ರಮಾಚರಣೆಗಾಗಿ 500 ಗ್ರಾಂ ಗಾಂಜಾ ಸರಬರಾಜು ಮಾಡುತ್ತಿದ್ದವನ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ನೀಲಿ ಬಣ್ಣದ ಕೈ ಚೀಲದಲ್ಲಿ ಸಂಗ್ರಹಿಸಿದ್ದ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದಾಂಡೇಲಿ ಬೈಲಪಾರದ ಚಾಲಕ ಫೈರೋಜ ಯರಗಟ್ಟಿ ಡಿ 31ರಂದು ಕೈ ಚೀಲದಲ್ಲಿ ಗಾಂಜಾ ಹಿಡಿದು ಸಂಚರಿಸುತ್ತಿದ್ದ. ಹೊಸ ವರ್ಷದ ಆಚರಣೆ ವೇಳೆ ಇದನ್ನು ಮಾರಾಟ ಮಾಡಲು ಆತ ಉದ್ದೇಶಿಸಿದ್ದ. ದಾಂಡೇಲಿ ರೈಲ್ವೆ ನಿಲ್ದಾಣದ ಬಳಿ ಅಲೆದಾಡುತ್ತಿದ್ದ ಆತನನ್ನು ಪೊಲೀಸ್ ಉಪನಿರೀಕ್ಷಕ ಅಮೀನಸಾಬ ಅತ್ತಾರ್ ವಿಚಾರಿಸಿದರು.
ಪೊಲೀಸರನ್ನು ಕಂಡು ತಡವರಿಸಿದ ಆತನ ಜೇಬು ತಟಕಾಡಿದಾಗ ಪೊಲೀಸರಿಗೆ 100ರೂ ಸಿಕ್ಕಿತು. ಕೈಯಲ್ಲಿರುವ ನೀಲಿ ಕೈ ಚೀಲದ ಒಳಗೆ 16 ಪೆಪರ್ ಚೂರುಗಳಿದ್ದವು. ಅಲ್ಲಿದ್ದ ಬಟ್ಟೆಯನ್ನು ಬಿಚ್ಚಿ ನೋಡಿದಾಗ 40 ಸಾವಿರ ರೂ ಮೌಲ್ಯದ ಗಾಂಜಾ ಕಂಡಿತು. ತಕ್ಷಣ ಅದನ್ನು ವಶಕ್ಕೆ ಪಡೆದ ಪೊಲೀಸರು ಫೈರೋಜನ ವಿರುದ್ಧ ಪ್ರಕರಣ ದಾಖಲಿಸಿಕೊಂಡರು.