ಅಂಕೋಲಾ: ಕುಡಿತದ ಚಟ, ಅನಾರೋಗ್ಯ ಸೇರಿ ವಿವಿಧ ಸಮಸ್ಯೆಗಳಿಂದ ಬಳಲುತ್ತಿದ್ದ ವಿಷ್ಣು ಗೌಡ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಅಚವೆಯ ಚನಗಾರದ ವಿಷ್ಣು ಗೌಡ (55) ಕೃಷಿ ಕೆಲಸ ಮಾಡುತ್ತಿದ್ದರು. ದುಡಿದ ಹಣವನ್ನು ಸರಾಯಿ ಅಂಗಡಿಗೆ ಚೆಲ್ಲುತ್ತಿದ್ದರು. ಎರಡು ವರ್ಷದ ಹಿಂದೆ ಅನಾರೋಗ್ಯಕ್ಕೆ ಒಳಗಾದ ಅವರು ಚೇತರಿಸಿಕೊಂಡಿರಲಿಲ್ಲ. ಈ ಬಗ್ಗೆ ಸದಾ ಬೇಸರದಿಂದ ಇರುತ್ತಿದ್ದರು.
ಡಿ 30ರ ರಾತ್ರಿ ಮನೆಯಲ್ಲಿದ್ದ ಅವರು ಡಿ 31ರ ಬೆಳಗ್ಗೆ ಶವವಾಗಿದ್ದಾರೆ. ಮನೆ ಮುಂದಿನ ಮಾವಿನ ಮರಕ್ಕೆ ನೇಣು ಹಾಕಿಕೊಂಡು ಅವರು ಸಾವನಪ್ಪಿದ್ದಾರೆ. ಅವರ ಪತ್ನಿ ಶಾಮಲಾ ಗೌಡ ಈ ಬಗ್ಗೆ ಪೊಲೀಸ್ ಪ್ರಕರಣ ದಾಖಲಿಸಿದರು.