ಯಲ್ಲಾಪುರ: ಕಳಚೆ ಸಹ್ಯಾದ್ರಿ ಸೇವಾ ಸಹಕಾರಿ ಸಂಘದ ವಶದಲ್ಲಿದ್ದ ಲಾರಿಯ ಚಕ್ರಗಳು ಕಾಣೆಯಾಗಿದೆ. ಬ್ಯಾಂಕ್ ಸಿಬ್ಬಂದಿ ಜೊತೆ ಇನ್ನೂ ನಾಲ್ವರ ಮೇಲೆ ಅನುಮಾನವ್ಯಕ್ತಪಡಿಸಿ ಲಾರಿ ಚಾಲಕ ಪೊಲೀಸ್ ದೂರು ದಾಖಲಿಸಿದ್ದಾರೆ.
ಕಿರವತ್ತಿಯ ಜಯಂತಿ ನಗರದ ಮಹಮದ್ ರಫೀಕ್ 19 ಲಕ್ಷ ರೂ ಸಾಲ ಮಾಡಿ ಲಾರಿ ಖರೀದಿಸಿದ್ದರು. ಸಾಲದ ಕಂತನ್ನು ಅವರು ಪಾವತಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಹುಬ್ಬಳ್ಳಿಯಲ್ಲಿದ್ದ ಲಾರಿಯನ್ನು ಸೊಸೈಟಿಯವರು ವಶಕ್ಕೆ ಪಡೆದಿದ್ದರು. ಆ ಲಾರಿಯನ್ನು ಬಿಲ್ಲಿಗದ್ದೆಯ ಅರಣ್ಯ ಪ್ರದೇಶದ ಅಂಚಿನ ಬ್ಯಾಂಕ್ ಸಿಬ್ಬಂದಿ ಮನೆಯಲ್ಲಿರಿಸಿದ್ದು, 80 ಸಾವಿರ ರೂ ಮೌಲ್ಯದ ಚಕ್ರಗಳು ಕಣ್ಮರೆಯಾಗಿದೆ.
`ಡಿ 23ರಂದು ಸೊಸೈಟಿಯವರು ಲಾರಿಯನ್ನು ವಶಕ್ಕೆ ಪಡೆದಿದ್ದರು. ಡಿ 26ರಂದು ಲಾರಿಯ ಟಯರ್ ಕಳ್ಳತನ ಮಾಡಿದ್ದಾರೆ’ ಎಂದು ಮಹಮದ್ ರಫೀಕ್ ದೂರಿದ್ದಾರೆ. ನರಹರಿ ಹೆಗಡೆ, ಶಿವಕುಮಾರ ಗೌಡರ್, ರವೀಶ ಭಟ್ಟ ಜೊತೆ ಇನ್ನಿಬ್ಬರು ಸೇರಿ ಈ ಕಳ್ಳತನ ನಡೆಸಿರುವ ಬಗ್ಗೆಯೂ ಮಹಮದ್ ರಫೀಕ್ ದೂರಿದ್ದಾರೆ.