ಕುಮಟಾ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದ ಸ್ವಾತಿ ಗೌಡ ಅವರು ಪಿಎಸ್‌ಐ ಆಗಿ ಆಯ್ಕೆಯಾಗಿದ್ದಾರೆ.
ಸ್ವಾತಿ ಗೌಡ ಅವರು ಬಾಲ್ಯದಿಂದಲು ಚುರುಕು ವ್ಯಕ್ತಿತ್ವದವರು. ಕುಮಟಾದ ಹೆರವಟ್ಟಾ ಅವರ ಊರು. ಭಾರತ ಸರ್ಕಾರದ ಯುಪಿಸಿಸಿ ಪರೀಕ್ಷೆ ಎದುರಿಸಬೇಕು ಎಂಬುದು ಅವರ ಕನಸು. ಸ್ವಾತಿ ಗೌಡ ಅವರು ಎಂ ಎಸ್ಸಿ ಪದವಿ ಮುಗಿಸಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿದ್ದರು.
ಸ್ವಾತಿ ಗೌಡ ಅವರು ಉತ್ತರ ಕನ್ನಡ ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷೆ ಗಾಯತ್ರಿ ಗೌಡ ಅವರ ಪುತ್ರಿ. ಸ್ವಾತಿ ಗೌಡ ಅವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಸದ್ಯ ಹಾಲಕ್ಕಿ ಸಮುದಾಯದ ಎರಡನೇ ಮಹಿಳಾ ಪಿಎಸ್‌ಐ ಎಂಬ ಹಿರಿಮೆಯನ್ನು ಅವರು ಪಡೆದಿದ್ದಾರೆ.





