ಕುಮಟಾ: ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷರೂ ಆಗಿರುವ ನ್ಯಾಯವಾದಿ ರವೀಂದ್ರ ನಾಯ್ಕ ಅವರು ಅರಣ್ಯ ಅತಿಕ್ರಮಣದಾರರಿಗೆ `ಕಾನೂನು ಅರಿವು’ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ. ಕುಮಟಾ ಮಾಸ್ತಿಕಟ್ಟಾದಲ್ಲಿ ಸೋಮವಾರ ಸಾವಿರಕ್ಕೂ ಅಧಿಕ ಅತಿಕ್ರಮಣದಾರರಿಗೆ ಅವರು ತರಬೇತಿ ನೀಡಿದರು. `ಅರಣ್ಯ ಅತಿಕ್ರಮಣದಾರರು ಕಾನೂನು ಜ್ಞಾನ ಹೆಚ್ಚಿಸಿಕೊಂಡು ಕಾಯ್ದೆ ಅನುಷ್ಠಾನದಲ್ಲಿನ ನ್ಯೂನ್ಯತೆಗಳ ಸಂಕೋಲೆಯಿAದ ಹೊರಬರಬೇಕು’ ಎಂದು ಈ ವೇಳೆ ರವೀಂದ್ರ ನಾಯ್ಕ ಕರೆ ನೀಡಿದ್ದಾರೆ.
`ಕಾನೂನು ಜ್ಞಾನದಿಂದ ವಂಚಿತರಾಗಿ ಅರಣ್ಯವಾಸಿಗಳಿಗೆ ಸಮಸ್ಯೆ ಉಂಟಾಗಬಾರದು. ಹೀಗಾಗಿ ಸಾವಿರ ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ಕಾನೂನು ಜ್ಞಾನದ ಬಗ್ಗ ಅರಿವು ಮೂಡಿಸಲಾಗುತ್ತದೆ’ ಎಂದವರು ಮಾಹಿತಿ ನೀಡಿದರು. `ಅರಣ್ಯ ಭೂಮಿ ಸಾಗುವಳಿದಾರರು ಭೂಮಿ ಹಕ್ಕನ್ನು ಪಡೆಡುಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ಈ ನಡುವೆ ಒಕ್ಕಲೆಬ್ಬಿಸುವಿಕೆ, ದೌರ್ಜನ್ಯ, ಕಿರುಕುಳ ಸಾಮಾನ್ಯವಾಗಿದ್ದು, ಅದರಿಂದ ರಕ್ಷಣೆ ಪಡೆಯಲು ಪ್ರತಿಯೊಬ್ಬರಿಗೂ ಈ ನೆಲದ ಕಾನೂನಿನ ಮಹತ್ವ ಅಗತ್ಯ’ ಎಂದವರು ಪ್ರತಿಪಾದಿಸಿದರು.
ಸಂಘಟನೆ ತಾಲೂಕಾ ಅಧ್ಯಕ್ಷ ಮಂಜುನಾಥ ಮರಾಠಿ, ಜಿಲ್ಲಾ ಸಂಚಾಲಕ ಮಹೇಂದ್ರ ನಾಯ್ಕ ಕತಗಾಲ, ಯಾಕುಬ ಸಾಬ, ಸೀತರಾಮ ನಾಯ್ಕ, ಜಗದೀಶ ಹರಿಕ್ರಂತ, ಶಂಕರ ಗೌಡ, ಹರಿಶ್ಚಂದ್ರ ಮರಾಠಿ, ಸುನೀತಾ ಹರಿಕಾಂತ, ಜಗದೀಶ ನಾಯ್ಕ ಕತಗಾಲ ಉಪಸ್ಥಿತರಿದ್ದರು.