ದಾಂಡೇಲಿ: ಖರೀದಿಸಿದ ಭೂಮಿ ಅಭಿವೃದ್ಧಿಗೆ ತೊಡಗಿದ ಮೂವರಿಗೆ ಅನಗತ್ಯ ಅಡ್ಡಿ-ಆತಂಕ ಎದುರಾಗುತ್ತಿದೆ. ಇದೀಗ ದುಷ್ಕರ್ಮಿಗಳು ಅಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾ ಒಡೆದು, ಕಪೌಂಡ್’ನ್ನು ಕಿತ್ತು ಹಾಕಿದ್ದಾರೆ.
ದಾಂಡೇಲಿ ಅಲೈಡ್ ಏರಿಯಾದ ರಾಮದಾಸ ಗಣಪಾ ಮಿರಾಶಿ ಹಣಕಾಸಿನ ಅಡಚಣೆಯಿಂದ ತಮ್ಮ 9.94 ಗುಂಟೆ ಭೂಮಿಯನ್ನು ಮಾರಾಟ ಮಾಡಿದ್ದರು. ದಾಂಡೇಲಿ ಮಾರುತಿನಗರದ ನಾಗರಾಜ ದಾನಿಯಲ್, ದಾಂಡೇಲಿಯ ಪ್ರಶಾಂತ ಶೆಟ್ಟಿ ಹಾಗೂ ಸುರೇಶ ಜೋಶಿ ಇದನ್ನು ಖರೀದಿಸಿದ್ದರು.
ಆದರೆ, ಈ ಭೂಮಿ ಅಭಿವೃದ್ಧಿಗೆ ತೆರಳಿದಾಗ ಇತರರಿಂದ ಅವರಿಗೆ ಆತಂಕ ಎದುರಾಗುತ್ತಿರುವ ಹಿನ್ನಲೆ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಈ ಹಿನ್ನಲೆ ಅವರು ಆತಂಕ ಮಾಡುವವರ ವಿರುದ್ಧ ತಡೆಯಾಜ್ಞೆ ತಂದಿದ್ದರು.
ಆದರೆ, ಅದನ್ನು ಮೀರಿ ಡಿಸೆಂಬರ್ 26 ಹಾಗೂ 28ರಂದು ಅಕ್ರಮ ಪ್ರವೇಶ ಮಾಡಿದ ಪಾಂಡುರAಗ ಹರಿಜನ, ಶಿವಾಜಿ ಹರಿಜನ, ಮಂಜುಳಾ ನಾಯರ್ ಅಲ್ಲಿದ್ದ ವಸ್ತುಗಳನ್ನು ದ್ವಂಸ ಮಾಡಿರುವ ಬಗ್ಗೆ ನಾಗರಾಜ ದಾನಿಯಲ್ ದೂರಿದ್ದಾರೆ. ಅಲ್ಲಿ ಕೆಲಸ ಮಾಡುತ್ತಿರುವವರಿಗೂ ಆರೋಪಿತರು ನಿಂದಿಸುತ್ತಿರುವ ಬಗ್ಗೆ ಪೊಲೀಸ್ ದೂರು ದಾಖಲಿಸಿದ್ದಾರೆ.